ಮಕ್ಕಳ ಕಳ್ಳಿ ಎಂದು ಮಹಿಳೆಯೋರ್ವರನ್ನು ಗ್ರಾಮಸ್ಥರು ಥಳಿಸಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದಿದೆ. ದೇವರ ಹೆಸರಲ್ಲಿ ಭವಿಷ್ಯ ಹೇಳ್ತಿದ್ದ ಜೋಗತಿ ಸೀತಮ್ಮ ಶಾಲೆಯ ಮಕ್ಕಳನ್ನು ಕರೆಯುತ್ತಿದ್ದಳು ಎಂದು ಆರೋಪಿಸಿರುವ ಗ್ರಾಮಸ್ಥರು, ಆಕೆಯನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಬಳಿಕ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ನೇಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.