ಸಾಮಾಜಿಕ ಜಾಲತಾಣದ 'ರೀಲ್ಸ್'ಗಾಗಿ ನಿಂತಿದ್ದ ರೈಲಿಗೆ ಸೀರೆ ಸೆರಗು ಕಟ್ಟಿ, ರೈಲ್ವೆ ಹಳಿ ಮೇಲೆ ನರ್ತಿಸಿದ ಮಹಿಳೆಯ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ವೀಡಿಯೊದಲ್ಲಿ, ಸೀರೆ ಮತ್ತು ಕಪ್ಪು ಕನ್ನಡಕ ಧರಿಸಿರುವ ಮಹಿಳೆಯೊಬ್ಬಳು ರೈಲ್ವೆ ಹಳಿಯ ಮೇಲೆ ನಿಂತಿರುವುದು ಹಾಗೂ ಅಲ್ಲಿಯೇ ನಿಂತಿದ್ದ ರೈಲಿನ ಎಂಜಿನ್ಗೆ ತನ್ನ ಸೀರೆಯ ತುದಿಯನ್ನು ಗಂಟು ಹಾಕಿ ನರ್ತಿಸಿರುವುದು ಕಂಡುಬಂದಿದೆ.