ಕರ್ನಾಟಕ-ತಮಿಳುನಾಡು ಗಡಿ ಭಾಗದ ಗುಮ್ಮಾಳಾಪುರದಲ್ಲಿ ನಡೆದ ಜಲ್ಲಿಕಟ್ಟು ಪಂದ್ಯದ ವೇಳೆ ತಮ್ಮ ನೆಚ್ಚಿನ ರಾಸು ಜೊತೆ ತೊಡೆತಟ್ಟಿ ಹೆಣ್ಮಕ್ಕಳು ಸವಾಲ್ ಹಾಕಿದ್ದಾರೆ. ನಮ್ಮ ರಾಸು ಬರ್ತಿದೆ ತಾಕತ್ ಇದ್ರೆ, ತಡೆಯಿರಿ ಎಂದು ತೊಡೆತಟ್ಟಿದ್ದಾರೆ. ನುಗ್ಗಿ ಬರುವ ರಾಸುಗಳನ್ನ ಹಿಡಿಯಲು ಅಖಾಡದಲ್ಲಿ ಯುವಕರ ದಂಡೇ ನೆರೆದಿದ್ದು, ಸದ್ಯ ಹೆಣ್ಮಕ್ಕಳು ತೊಡೆತಟ್ಟಿ ಸವಾಲ್ ಹಾಕಿರುವ ವಿಡಿಯೋ ವೈರಲ್ ಆಗಿದೆ.