ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಆರೋಪ ಮಾಡಿದ್ದು, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ 240 ಕೋಟಿ ಹಗರಣ ನಡೆದಿದೆ. ಈ ಹಗರಣದಲ್ಲಿ ಬಿ.ವೈ.ವಿಜಯೇಂದ್ರಗೂ ಪಾಲು ಹೋಗಿದೆ. ಶಿವಶಂಕರಪ್ಪಗೆ 25%, ಬಿ.ವೈ.ವಿಜಯೇಂದ್ರಗೆ 75% ಪಾಲು ಹೋಗಿದ್ದು, ಸಿಎಂ ಕೂಡ ಪಾಲುದಾರರು. ಕೆಪಿಎಸ್ಸಿ ಹಗರಣದ ವಿರುದ್ಧ ಮಾತನಾಡಿದ್ದಕ್ಕೆ ನನಗೂ ಕರೆ ಬಂದಿತ್ತು. ಲಿಂಗಾಯತರೇ ಇದ್ದಾರೆ ಸರ್ ಎಂದು ಸಮಜಾಯಿಷಿ ನೀಡಲು ಬಂದ್ರು. ಹಗರಣದಲ್ಲಿ ಯಾರೇ ಇರಲಿ, ಎಲ್ಲರಿಗೂ ಶಿಕ್ಷೆಯಾಗಬೇಕೆಂದು ಅವರು ತಿಳಿಸಿದ್ದಾರೆ.