ನವೆಂಬರ್ನಲ್ಲಿ ಬಿವೈ ವಿಜಯೇಂದ್ರ ಅವರ ಬಿಜೆಪಿ ರಾಜ್ಯಾಧ್ಯಕ್ಷ ಅವಧಿ ಮುಕ್ತಾಯವಾಗಲಿದ್ದು, ಹೈಕಮಾಂಡ್ ಅವರ ಅಧಿಕಾರ ನವೀಕರಿಸುವುದಿಲ್ಲ ಎಂಬುದು ಖಚಿತವಾಗಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಹೈಕಮಾಂಡ್ ಮೇಲೆ ಒತ್ತಡ ಹೇರಲು ವಿಜಯೇಂದ್ರ ವೈಭವೀಕರಣದ ಸಮಾವೇಶ ಮಾಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.