ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪುತ್ರ ರಾಮನಗೌಡ ಪಾಟೀಲ್ ವಿವಾಹ ಸಂಭ್ರಮ ಅದ್ಧೂರಿಯಾಗಿ ನಡೆಯಿತು. ಬೀದರ್ ಮೂಲದ ಉದ್ಯಮಿ ಪುತ್ರಿ ಆಬೋಲಿ ಜೊತೆ ರಾಮನಗೌಡ ಮದುವೆಯಾಗಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಯತ್ನಾಳ್ ಕುಟುಂಬ ಸದಸ್ಯರೊಂದಿಗೆ 'ಬ್ಯಾಂಗಲ್ ಬಂಗಾರಿ' ಹಾಡಿಗೆ ನೃತ್ಯ ಮಾಡಿ, ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆ ಆವರಣದಲ್ಲಿ ಮದುವೆ ಸಮಾರಂಭ ಜರುಗಿತು.