ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿ.ವೈ. ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಭೇಟಿ ವೇಳೆ ಹಿರಿಯ ನಾಯಕರ ಬದಲಿಗೆ ಚೇಲಾಗಳನ್ನು ಕರೆದೊಯ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್ಎಸ್ಎಸ್ ಟೀಕೆ, ಜೆಡಿಎಸ್ ಮೈತ್ರಿ ಹಾಗೂ ಯಡಿಯೂರಪ್ಪನವರ ಭ್ರಷ್ಟಾಚಾರ ಆರೋಪಗಳ ಕುರಿತು ಮಾತನಾಡಿದ್ದು, ವಿಜಯಪುರದಲ್ಲಿ ನನ್ನನ್ನು ತಡೆಯುವ ದಮ್ಮು ಯಾರಿಗಿದೆ ಎಂದು ಸವಾಲು ಹಾಕಿದ್ದಾರೆ.