ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕುರಿತು, "ಪ್ರಿಯಾಂಕಾ ಹೇಗಿದ್ದೀರ?" ಎಂದು ವಿಚಾರಿಸಿದ್ದಾರೆ. ಅದಕ್ಕೆ ಪ್ರಿಯಾಂಕಾ, "ನಾನು ಚೆನ್ನಾಗಿದ್ದೇನೆ ಸರ್! ನೀವು ಹೇಗಿದ್ದೀರಿ?" ಎಂದು ಉತ್ತರಿಸಿದರು. ಅದಕ್ಕೆ ಮೋದಿ, "ನಾನು ಯಾವಾಗಲೂ ಹೇಗಿರುತ್ತೇನೋ ಹಾಗೆಯೇ ಇದ್ದೇನೆ" ಎಂದರು. ಪ್ರಧಾನಿಯವರ ಈ ಉತ್ತರಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, "ಭಾಯಿ ಸಾಬ್, ನೀವು ಸ್ವಲ್ಪ ಬದಲಾಗಿದ್ದೀರಿ" ಎಂದು ತಮಾಷೆ ಮಾಡಿದರು.