ಇವನ ಮುಖದ ಮೇಲೆ ಈಗಷ್ಟೇ ಮೀಸೆ ಮೂಡಿದೆ. ಆದ್ರೆ, ರಸ ತೆಗೆದ ಕಬ್ಬಿನ ಸಿಪ್ಪೆಯಂತಿರೋ ಇವನು, ಯುವಕನೊಬ್ಬನ ಹೆಣ ಬೀಳಿಸಿದ್ದಾನೆ. ಅಷ್ಟೇ ಅಲ್ಲ ನಾನು ಮರ್ಡರ್ ಮಾಡಿದ್ದೇನೆ ಅಂತಾ ಸ್ವತಃ ಸೆಲ್ಫಿ ವಿಡಿಯೋ ಮಾಡಿ ರಾಜಾರೋಷವಾಗೇ ತನ್ನ ಕ್ರೌರ್ಯವನ್ನ ಹೇಳಿಕೊಂಡಿದ್ದಾನೆ. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಕೊಲೆಯಾಗಿದೆ.