ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚುಂಚಗನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಭೀಕರ ಕೊಲೆಯೊಂದು ನಡೆದಿದೆ. ಸ್ನೇಹಿತರೊಂದಿಗೆ ಬಾರ್ಗೆ ಹೋಗಿದ್ದ ಸುನೀಲ್ (29) ಎಂಬ ಯುವಕ, ಅಲ್ಲಿನ ಕ್ಯಾಷಿಯರ್ನನ್ನು ಮತ್ತೊಂದು ತಂಡ 'ಬಾಸ್' ಎಂದು ಕರೆದಿದ್ದಕ್ಕೆ ಗಲಾಟೆ ತೆಗೆದಿದ್ದನು. ಇದೇ ಕೋಪದಲ್ಲಿ ಎದುರಾಳಿ ಯುವಕರ ತಂಡ ಸುನೀಲ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ದಾರುಣವಾಗಿ ಹತ್ಯೆ ಮಾಡಿದೆ.