Temple Tour: ರೈತರ ಕೋರಿಕೆ ಈಡೇರಿಸುತ್ತಾನೆ ವೀರಭದ್ರೇಶ್ವರ ಸ್ವಾಮಿ

ಈ ವೀರಭದ್ರೇಶ್ವರ ದೇವರ ಮುಂದೆ ಭಕ್ತಿಯಿಂದ ಬೇಡಿಕೊಂಡರೆ ಅವರ ಹರಕೆಗಳು ನೂರಕ್ಕೆ ನೂರರಷ್ಟು ಈಡೇರುತ್ತವೆ ಎನ್ನುವ ನಂಬಿಕೆಯಿದೆ.

ವೀರಶೈವ ಲಿಂಗಾಯತರ ಆರಾಧ್ಯ ದೇವರು ಶ್ರೀ ವೀರಭದ್ರೇಶ್ವರ ದೇವರು. ವೀರಭದ್ರೇಶ್ವರ ದೇವರು ಹಾಗೂ ದೇವಸ್ಥಾನ ನಾಡಿನ ಮೂಲೆ ಮೂಲೆಯಲ್ಲಿವೆ. ಆದರೆ ಈ ದೇವಾಲಯ ಎಲ್ಲಾ ದೇವಾಲಯಕ್ಕಿಂತ ವಿಭಿನ್ನವಾಗಿದೆ. ಬಹುತೇಕ ದೇವಾಲಯದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ ಮೇಲೆ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಆದರೆ ಈ ಅಪರೂಪದ ದೇವಸ್ಥಾನದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ಮೇಲೆಯೇ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ. ಈ ವೀರಭದ್ರೇಶ್ವರ ದೇವರ ಮುಂದೆ ಭಕ್ತಿಯಿಂದ ಬೇಡಿಕೊಂಡರೆ ಅವರ ಹರಕೆಗಳು ನೂರಕ್ಕೆ ನೂರರಷ್ಟು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಹಾಗಾಗಿ ಈ ಭಾಗದ ಆರಾಧ್ಯ ದೇವರಾಗಿದ್ದಾನೆ ಶ್ರೀ ವೀರಭದ್ರೇಶ್ವರ ದೇವರು. ವೀರಭದ್ರೇಶ್ವರ ದೇವರಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿ ಮಾಡಿ ಈ ಭಾಗದ ರೈತರು ಬಿತ್ತನೆ ಕಾರ್ಯಕ್ಕೆ ಹೋಗುತ್ತಾರೆ.

Click on your DTH Provider to Add TV9 Kannada