ನಾನು ಬದುಕಿದ್ದೀನಾ? ಕೆ.ಆರ್. ನಗರದ ಶಾಸಕರು ಬದುಕಿದ್ದಾರಾ? ಸಾರಾ ಮಹೇಶ್​ಗೆ ಎಸ್​ಟಿಎಸ್​ ಟಾಂಗ್

‘ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ?’ ಸಾ.ರಾ.ಮಹೇಶ್ ಹೇಳಿಕೆಗೆ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ನಾನು ಬದುಕಿದ್ದೀನಾ? ಕೆ.ಆರ್.ನಗರ ಶಾಸಕ ಬದುಕಿದ್ದಾರಾ? ಯಾರು ಬದುಕಿದ್ದಾರೆಂಬುದನ್ನು ಜನ ತೀರ್ಮಾನಿಸಿ ಹೇಳಲಿ. ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್‌ ಹೇಳಿದ್ದಾರೆ. ಜಿಲ್ಲೆಯ ಜನರಿಗಾಗಿ ನಾನು ಪ್ರಾಣ ಕೊಡಲು ಸಿದ್ಧನಿದ್ದೇನೆ. ಮೈಸೂರಿನ 10 ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿದ್ದೇನೆ.

  • TV9 Web Team
  • Published On - 18:26 PM, 29 Apr 2021

 

‘ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಬದುಕಿದ್ದಾರಾ?’ ಸಾ.ರಾ.ಮಹೇಶ್ ಹೇಳಿಕೆಗೆ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ನಾನು ಬದುಕಿದ್ದೀನಾ? ಕೆ.ಆರ್.ನಗರ ಶಾಸಕ ಬದುಕಿದ್ದಾರಾ? ಯಾರು ಬದುಕಿದ್ದಾರೆಂಬುದನ್ನು ಜನ ತೀರ್ಮಾನಿಸಿ ಹೇಳಲಿ. ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್‌ ಹೇಳಿದ್ದಾರೆ. ಜಿಲ್ಲೆಯ ಜನರಿಗಾಗಿ ನಾನು ಪ್ರಾಣ ಕೊಡಲು ಸಿದ್ಧನಿದ್ದೇನೆ. ಮೈಸೂರಿನ 10 ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿದ್ದೇನೆ. ಯಾವ ಸಭೆಗೂ ಶಾಸಕ ಸಾ.ರಾ.ಮಹೇಶ್ ಬರಲೇ ಇಲ್ಲ. ಯಾರು ಕೆಲಸ ಮಾಡುತ್ತಿದ್ದಾರೆಂದು ಜನ ಗಮನಿಸುತ್ತಿದ್ದಾರೆ. ಪ್ರತಿದಿನ ವೆಂಟಿಲೇಟರ್‌, ಬೆಡ್‌ಗಾಗಿ ಹತ್ತಾರು ಕರೆ ಬರುತ್ತೆ. ಹೀಗಾಗಿ ನಾನು ಯಾರಿಗೂ ಶಿಫಾರಸು ಮಾಡಿಲ್ಲ ಅಂತಾ S.T.ಸೋಮಶೇಖರ್ ಹೇಳಿದ್ದಾರೆ.

(ST Somashekar says he is ready to die for people of the state)