ಕಿರುತೆರೆ ನಟಿ ಸುನೇತ್ರಾ ಅಪಘಾತಕ್ಕೆ ಒಳಗಾದ ಘಟನೆಯ ಸಿಸಿಟಿವಿ ದೃಶ್ಯ ಇಲ್ಲಿದೆ

ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಆ್ಯಕ್ಸಿಡೆಂಟ್ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಪಘಾತದಿಂದ ಸುನೇತ್ರಾ ಅವರಿಗೆ ಕೆಲವು ಗಂಭೀರ ಗಾಯಗಳು ಆಗಿವೆ. ಈ ಅಪಘಾತ ಸಮಯದಲ್ಲಿ ಏನೆಲ್ಲ ಆಯ್ತು ಎಂಬುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

TV9kannada Web Team

| Edited By: Rajesh Duggumane

May 08, 2022 | 2:20 PM

ಶನಿವಾರ ತಡರಾತ್ರಿ ಶೂಟಿಂಗ್ ಮುಗಿಸಿಕೊಂಡು ಮನೆಗೆ ತೆರಳುವಾಗ ಕಿರುತೆರೆ ನಟಿ ಸುನೇತ್ರಾ ಪಂಡಿತ್ ಅವರಿಗೆ (Sunetra Pandit) ಅಪಘಾತ ಆಗಿದೆ. ಬೆಂಗಳೂರಿನ (Bengaluru) ಎನ್.ಆರ್. ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅವರು ಬಿದ್ದಿದ್ದಾರೆ. ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಆ್ಯಕ್ಸಿಡೆಂಟ್ (Accident) ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅಪಘಾತದಿಂದ ಸುನೇತ್ರಾ ಅವರಿಗೆ ಕೆಲವು ಗಂಭೀರ ಗಾಯಗಳು ಆಗಿವೆ. ಈ ಅಪಘಾತ ಸಮಯದಲ್ಲಿ ಏನೆಲ್ಲ ಆಯ್ತು ಎಂಬುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈಗ ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಅಪಘಾತ ಸಂಭವಿಸಿದ್ದು ಹೇಗೆ ಎನ್ನುವುದನ್ನು ನೋಡಲು ಮೇಲಿನ ವಿಡಿಯೋ ನೋಡಿ. ಸದ್ಯ ಸುನೇತ್ರಾ ಪಂಡಿತ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಅಪಘಾತದ ವೇಳೆ ತೀವ್ರ ರಕ್ತಸ್ರಾವ ಆಗಿದೆ ಎಂದು ತಿಳಿದು ಬಂದಿದೆ.

Follow us on

Click on your DTH Provider to Add TV9 Kannada