ರವಿಚಂದ್ರನ್ ಈ ವಿಚಾರದಲ್ಲಿ ತುಂಬಾ ಪುಣ್ಯವಂತರು ಎಂದು ನಟಿ ತಾರಾ

‘ತ್ರಿವಿಕ್ರಮ’ ಸಿನಿಮಾದ ಕೊನೆಯ ಹಂತದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಕಾರ್ಯಕ್ರಮದಲ್ಲಿ ನಟಿ ತಾರಾ, ನಟ ಶರಣ್, ಮನುರಂಜನ್ ಮೊದಲಾದವರು ಭಾಗಿ ಆಗಿದ್ದರು. ವೇದಿಕೆ ಏರಿದೆ ತಾರಾ ಅವರು ರವಿಚಂದ್ರನ್ ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.

TV9kannada Web Team

| Edited By: Rajesh Duggumane

May 11, 2022 | 2:07 PM

ರವಿಚಂದ್ರನ್ (Ravichandran) ಮಕ್ಕಳು ಈಗ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಅವರ ಪುತ್ರ ವಿಕ್ರಮ್ ರವಿಚಂದ್ರನ್ ‘ತ್ರಿವಿಕ್ರಮ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ವಿಕ್ರಮ್​ಗೆ (Vikram) ಜತೆಯಾಗಿ ಆಕಾಂಕ್ಷ ಶರ್ಮಾ (Akanksha Sharma) ಕಾಣಿಸಿಕೊಂಡಿದ್ದಾರೆ. ‘ತ್ರಿವಿಕ್ರಮ’ ಸಿನಿಮಾದ ಕೊನೆಯ ಹಂತದ ಕೆಲಸಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗೆ ತಂಡ ಸಿನಿಮಾದ ಆಡಿಯೋ ಬಿಡುಗಡೆ ಮಾಡಿ ಸಂಭ್ರಮಿಸಿತು. ಈ ಕಾರ್ಯಕ್ರಮದಲ್ಲಿ ನಟಿ ತಾರಾ, ನಟ ಶರಣ್, ಮನುರಂಜನ್ ಮೊದಲಾದವರು ಭಾಗಿ ಆಗಿದ್ದರು. ವೇದಿಕೆ ಏರಿದೆ ತಾರಾ ಅವರು ರವಿಚಂದ್ರನ್ ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ‘ಇಂತಹ ಮಕ್ಕಳನ್ನು ಪಡೆಯಲು ರವಿಚಂದ್ರನ್ ಅವರು ತುಂಬಾನೇ ಪುಣ್ಯ ಮಾಡಿದ್ದರು’ ಎನ್ನುವ ಮಾತನ್ನು ತಾರಾ ಹೇಳಿದ್ದಾರೆ. ‘ತ್ರಿವಿಕ್ರಮ’ ಸಿನಿಮಾ ಜೂನ್ 24ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಘೋಷಿಸಿದೆ.

Follow us on

Click on your DTH Provider to Add TV9 Kannada