Tokyo Olympics 2020: ಒಲಂಪಿಕ್ ಗ್ರಾಮದಲ್ಲಿ ಹರಿದಾಡುತ್ತಿರುವ ಸುದ್ದಿ; ಮೀರಾಬಾಯಿಗೆ ಬೆಳ್ಳಿ ಬದಲು ಚಿನ್ನದ ಪದಕ ಸಿಗಲಿದೆ!
ಒಲಂಪಿಕ್ಸ್ನಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳ ಡೋಪಿಂಗ್ ಟೆಸ್ಟ್ ನಡೆಸಲಾಗುತ್ತದೆ. ಆದರೆ ಹು ಅವರ ಪ್ರಕರಣದಲ್ಲಿ ಅಡ್ವರ್ಸ್ ಅನಾಲಿಟಿಕಲ್ ಫೈಂಡಿಂಗ್ (ಪ್ರತಿಕೂಲ ವಿಶ್ಲೇಷಣಾತ್ಮಕ ಶೋಧನೆ ) ನೋಡಲಾಗುತ್ತಿದೆ.
ಭಾರತಕ್ಕೊಂದು ಸತೋಷದ ಸುದ್ದಿ ಲಭ್ಯವಾಗುವ ಸಾಧ್ಯತೆಯಿದೆ. ಟೊಕಿಯೋ ಒಲಂಪಿಕ್ಸ್ 2020 ಆರಂಭಗೊಂಡ ದಿನವೇ ಮಹಿಳೆಯರ 49 ಕೆಜಿ ವೇಟ್-ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಕೊಟ್ಟ ಮಣಿಪುರದ ಹುಡುಗಿ ಮೀರಾಬಯಿಯು ಚಾನುಗೆ ಸ್ವರ್ಣ ಪದಕ ಸಿಗಬಹದೆಂದು ಹೇಳಲಾಗುತ್ತಿದೆ. ಅದು ಹೇಗೆ ಸಾಧ್ಯ ಅಂತ ನೀವು ಯೋಚಿಸುತ್ತಿರಬಹುದು, ಅಸಲಿಗೆ ವಿಷಯ ಏನೆಂದರೆ, ಈ ನಿರ್ದಿಷ್ಟ ಕೆಟೆಗೆರಿಯಲ್ಲಿ ಚಿನ್ನದ ಪದಕ ಗೆದ್ದ ಚೀನಾದ ಚಿಯು ಹು ಅವರು ಉದ್ದೀಪನಾ ಮದ್ದು ಸೇವಿಸಿರಬಹುದಾದ ಶಂಕೆಗೆ ಗುರಿಯಾಗಿದ್ದಾರೆ. ಒಂದು ಪಕ್ಷ ಅದು ನಿಜವಾದರೆ ಆಕೆಯನ್ನು ಅನರ್ಹಗೊಳಿಸಿ ಚಿನ್ನದ ಪದಕ ಕಸಿದು ಮೀರಾಬಾಯಿಗೆ ಕೊಡುತ್ತಾರೆ.
ನೀವು ಮರೆತಿರಲಾರಿರಿ. 2 ದಿನಗಳ ಹಿಂದೆ (ಶನಿವಾರ) ಹು ಅವರು ಒಟ್ಟು 210 ಕೆಜಿ ಭಾರ ಎತ್ತಿ ಹೊಸ ಒಲಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಆದರೆ, ಕ್ಲೀನ್ ಮತ್ತು ಜರ್ಕ್ನಲ್ಲಿ ವಿಶ್ವ ದಾಖಲೆ ಹೊಂದಿರುವ ಮೀರಾಬಾಯಿ, ಹು ಅವರಿಗಿಂತ 8ಕೆಜಿ ಕಡಿಮೆ ಆಂದರೆ ಒಟ್ಟು 202 ಕೆಜಿ ಎತ್ತಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಅವರ ಸಾಧನೆ ಮಹಳ ಮಹತ್ವದ್ದು, 2000 ಸಿಡ್ನಿ ಒಲಂಪಿಕ್ಸ್ನಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗೆದ್ದ ನಂತರ ಭಾರತಕ್ಕೆ ವೇಟ್-ಲಿಫ್ಟಿಂಗ್ನಲ್ಲಿ ಪದಕ ಬಂದಿರಲಿಲ್ಲ.
ಹಾಗೆ ನೋಡಿದರೆ, ಒಲಂಪಿಕ್ಸ್ನಲ್ಲಿ ಭಾಗವಹಿಸುವ ಎಲ್ಲ ಕ್ರೀಡಾಪಟುಗಳ ಡೋಪಿಂಗ್ ಟೆಸ್ಟ್ ನಡೆಸಲಾಗುತ್ತದೆ. ಆದರೆ ಹು ಅವರ ಪ್ರಕರಣದಲ್ಲಿ ಅಡ್ವರ್ಸ್ ಅನಾಲಿಟಿಕಲ್ ಫೈಂಡಿಂಗ್ (ಪ್ರತಿಕೂಲ ವಿಶ್ಲೇಷಣಾತ್ಮಕ ಶೋಧನೆ ) ನೋಡಲಾಗುತ್ತಿದೆ. ಅದರರ್ಥ ಅವರ ಮೊದಲ ಸ್ಯಾಂಪಲ್ನಲ್ಲಿ ಸಂಶಯಾಸ್ಪದ ಅಂಶವೇನಾದರೂ ಇತ್ತಾ ಎನ್ನುವುದನ್ನು ಪತ್ತೆ ಮಾಡಲಾಗುತ್ತದೆ.
ವಾಡಾ (WADA-World Anti-Doping Agency) ಪ್ರಕಾರ, ಪ್ರತಿಕೂಲ ವಿಶ್ಲೇಷಣಾತ್ಮಕ ಶೋಧನೆ ನಿರ್ದಿಷ್ಟ ಸ್ಯಾಂಪಲ್ನಲ್ಲಿ ನಿಷೇಧಿತ ವಸ್ತುಗಳು ಅಥವಾ ವಿಧಾನಗಳ ಉಪಸ್ಥಿತಿಯನ್ನು ಸೂಚಿಸುತ್ತದೆ, ಸದರಿ ಟೆಸ್ಟ್ ಫಲಿತಾಂಶ ಲಭ್ಯವಾಗುವವರೆಗೆ ಹು ಅವರನ್ನು ಒಲಂಪಿಕ್ ಗ್ರಾಮ ಬಿಟ್ಟು ಕದಲದಂತೆ ತಾಕೀತು ಮಾಡಲಾಗಿದೆ.