ಅಂತರಿಕ್ಷಯಾನಿ ಬ್ಯಾಹ್ಯಾಕಾಶದಲ್ಲಿ ಸತ್ತರೆ ಮೃತದೇಹ ಭೂಮಿಗೆ ತರಲಾಗದು, ಅದು ಅಲ್ಲೇ ತೇಲಾಡುತ್ತಿರುತ್ತದೆ!

ಅಂತರಿಕ್ಷಯಾನಿ ಬ್ಯಾಹ್ಯಾಕಾಶದಲ್ಲಿ ಸತ್ತರೆ ಮೃತದೇಹ ಭೂಮಿಗೆ ತರಲಾಗದು, ಅದು ಅಲ್ಲೇ ತೇಲಾಡುತ್ತಿರುತ್ತದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 11, 2021 | 4:27 PM

ಬಾಹಾಕ್ಯಾಶದಲ್ಲಿ ಸತ್ತಿರುವ ರಾಕೆಟ್ ಸೈಂಟಿಸ್ಟ್​​ಗಳ ಸಂಖ್ಯೆ ಬಹಳ ಕಮ್ಮಿ. ಇದುವರೆಗೆ ಒಟ್ಟು 18 ಅಂತರಿಕ್ಷಯಾನಿಗಳು ಹಾಗೆ ನಿಧನ ಹೊಂದಿದ್ದಾರೆ.

ಯಾರಾದರೂ ಒಂದು ಸುಲಭ ವಿಷಯವನ್ನು ಅರ್ಥಮಾಡಿಕೊಳ್ಳಲು ಕಷ್ಟಪಟ್ಟರೆ ಅದೇನು ರಾಕೆಟ್ ಸೈನ್ಸ್ ಏನಯ್ಯಾ ಅಂತ ಗದರುವುದುಂಟು. ಅದರರ್ಥ ಸರಳ ಮಾರಾಯ್ರೇ, ರಾಕೆಟ್ ಸೈನ್ಸ್ ಸುಲಭದ ವಿಷಯವಲ್ಲ. ಹಾಗೆಯೇ, ಬಾಹ್ಯಾಕಾಶಯಾನಿಗಳ ಬದುಕು ಸಹ ಸುಲಭಲ್ಲ. ಬದುಕು ಅನ್ನೋದಕ್ಕಿಂತ ಸಾವು ಅಂದರೆ ಹೆಚ್ಚು ಅರ್ಥಗರ್ಭಿತ ಅನಿಸಬಹುದು. ಯಾಕೆಂದರೆ ಅವರು ತಮ್ಮ ಇಸ್ರೋ ಕಚೇರಿಯಲ್ಲಿ ಅಥವಾ ನಾಸಾ ಕಚೇರಿಯಲ್ಲಿ ಕೆಲಸ ಮಾಡುವಾಗ ಏನಾದರೂ ಹೆಚ್ಚುಕಮ್ಮಿಯಾಗಿ ನಿಧನ ಹೊಂದಿದರೆ, ಅವರ ಧರ್ಮ ಮತ್ತು ನಂಬಿಕೆಗೆ ಅನುಗುಣವಾಗಿ ಅಂತ್ಯಸಂಸ್ಕಾರ ನಡೆಯುತ್ತದೆ. ಆದರೆ ಅವರೇನಾದರೂ ಒಂದು ಮಿಷನ್ ಮೇಲೆ ಅಂತರಿಕ್ಷಕ್ಕೆ ತೆರಳಿದ್ದಾಗ ಸಾವನ್ನಪ್ಪಿದರೆ ಅವರ ಮೃತ ದೇಹ ವಾಪಸ್ಸು ಭೂಮಿಗೆ ಬರಲಾರದು.

ಹಾಗೆ ನೋಡಿದರೆ, ಬಾಹಾಕ್ಯಾಶದಲ್ಲಿ ಸತ್ತಿರುವ ರಾಕೆಟ್ ಸೈಂಟಿಸ್ಟ್​​ಗಲ ಸಂಖ್ಯೆ ಬಹಳ ಕಮ್ಮಿ. ಇದುವರೆಗೆ ಒಟ್ಟು 18 ಅಂತರಿಕ್ಷಯಾನಿಗಳು ಹಾಗೆ ನಿಧನ ಹೊಂದಿದ್ದಾರೆ. ಎಷ್ಟೇ ಜನ ಸತ್ತಿರಲಿ ಅದು ಬೇರೆ ವಿಷಯ, ಆದರೆ ಅಂಥ ಸಾವು ಮಾತ್ರ ದೌರ್ಭಾಗ್ಯಕರ. ಬಾಹ್ಯಾಕಾಶಯಾನಿಗಳು ತೆರಳುವ ಸ್ಪೇಸ್ ಕ್ರಾಫ್ಟ್ನಲ್ಲಿ ಮೃತದೇಹ ಸಂರಕ್ಷಿಸಿಡುವುದಕ್ಕೆ ಸಾಧ್ಯವಿದೆಯಾದರೂ ಬಹಳ ಸಮಯದವರೆಗೆ ದೇಹವನ್ನು ಅಂತರಿಕ್ಷ ನೌಕೆಯಲ್ಲಿ ಇಟ್ಟುಕೊಳ್ಳುವುದು ಸಾಧ್ಯವಿಲ್ಲ.

ತಮ್ಮ ಜೊತೆಗಾರನೊಬ್ಬ ಸತ್ತರೆ ಉಳಿದ ಯಾನಿಗಳು ಪಾರ್ಥೀವ ಶರೀರವನ್ನು ಪ್ಯಾಕ್ ಮಾಡಿ ಅದನ್ನು ಏರ್ಲಾಕ್ ಗೆ ಲಾಕ್ ಮಾಡಿಬಿಡುತ್ತಾರೆ. ಆ ದೇಹ ಅಂತರಿಕ್ಷದಲ್ಲೇ ತೇಲಾಡಿಕೊಂಡಿರುತ್ತದೆ. ಅಂತರಿಕ್ಷ ನೌಕೆ ಭೂಮಿಯ ಗುರತ್ವಾಕರ್ಷಣೆ ಶಕ್ತಿಯ ಮಿತಿಗಿಂತ ಬಹಳ ಮೇಲಿರುತ್ತವಾದ್ದರಿಂದ ದೇಹ ಕೆಳಕ್ಕೆ ಬರುವುದಿಲ್ಲ.
ಶೂನ್ಯ ಗುರುತ್ವಾಕರ್ಷಣೆಯ ಪ್ರದೇಶದಲ್ಲಿ ಮೃತದೇಹ ಸ್ಫೋಟಗೊಳ್ಳುವ ಸಾಧ್ಯತೆಯೂ ಇರುತ್ತದೆ. ದೇಹ ಸ್ಪೋಟಗೊಳ್ಳದೆ ಹೋದರೆ ಹಾಗೆ ತೇಲಾಡುತ್ತಲೇ ಇರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮೃತದೇಹಗಳ ವಿಸರ್ಜನೆ ಮಾಡುವುದರ ಬಗ್ಗೆ ಪ್ರಯೋಗಗಳು ನಡೆಯುತ್ತಿವೆ. ಅಂತರಿಕ್ಷದಲ್ಲಿನ ಸ್ಥಿತಿಗೆ ಹೊಂದುವಂಥ ಶವಪೆಟ್ಟಿಗೆಯನ್ನು ತಯಾರಿಸುವ ಬಗ್ಗೆ ಬಾಹ್ಯಾಕಾಶ ಸಂಸ್ಥೆಗಳಳು ಸಂಶೋಧನೆ ನಡೆಸುತ್ತಿವೆ.

ಇದನ್ನೂ ಓದಿ:  Viral Video: ವಧು ವರರನ್ನು ಒಟ್ಟಿಗೆ ಮೇಲಕ್ಕೆತ್ತಿ ಕೆಳಗೆ ಬೀಳಿಸಿದ ಸ್ನೇಹಿತ; ವಿಡಿಯೋ ಇದೀಗ ಫುಲ್ ವೈರಲ್