ಬೈಕ್ ರೈಡರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ ಟಾಲಿವುಡ್​ ಸೆನ್ಸೇಷನ್ ಸ್ಟಾರ್ ದೇವರಕೊಂಡ

ಟಾಲಿವುಡ್​ ಸೆನ್ಸೇಷನ್ ನಟ ವಿಜಯ್ ದೇವರಕೊಂಡ ವರಸೆ ಬದಲಿಸಿದ್ದಾರೆ. ತಮ್ಮ ಅಭಿಮಾನಿಗಳಿಗೆ ಹೊಸ ರುಚಿ ತೋರಿಸೋಕೆ ನಿರ್ಧರಿಸಿದ್ದಾರೆ. ಲವ್ ಕಹಾನಿಗಳಿಗೆ ಬ್ರೇಕ್ ಹಾಕಿ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಟಾಲಿವುಡ್ ಸೆನ್ಸೇಷನ್ ಹಾಗೂ ಯೂತ್ ಫೇವರಿಟ್ ಸ್ಟಾರ್, ಹುಡುಗಿಯರ ಹಾರ್ಟ್ ಬೀಟ್​ ಹೆಚ್ಚಿಸೋ ಹ್ಯಾಂಡ್ಸಂ ಌಕ್ಟರ್ ವಿಜಯ್ ದೇವರಕೊಂಡ. ಅರ್ಜುನ್ ರೆಡ್ಡಿ ಮತ್ತು ಗೀತಗೋವಿಂದಂ ಸಿನಿಮಾಗಳು ಅಬ್ಬರಿಸಿದ ಮೇಲೆ ದೇವರಕೊಂಡ ಇಮೇಜೇ ಚೇಂಜ್ ಆಗಿಬಿಟ್ಟಿತ್ತು.

ವಿಜಯ್ ನಟಿಸಿದ ಫಿಲ್ಮ್​ಗಳಲ್ಲಿ ಲವರ್ ಬಾಯ್ ಆಗೇ ಹೆಚ್ಚು ಸೌಂಡ್ ಮಾಡಿದ್ದಾರೆ. ಆದ್ರೀಗ ಲವರ್​ ಬಾಯ್​ ಇಮೇಜ್​ ಬದಲಿಸೋಕೆ ಮುಂದಾಗಿದ್ದಾರೆ. ಈಗಾಗ್ಲೇ ವರ್ಲ್ಡ್ ಫೇಮಸ್ ಲವರ್ ಚಿತ್ರದಲ್ಲಿ ಌಕ್ಟ್ ಮಾಡ್ತಿರೋ ಅರ್ಜುನ್ ರೆಡ್ಡಿ, ಮುಂದಿನ ದಿನಗಳಲ್ಲಿ ಬೈಕ್ ರೈಡರ್​ ಆಗಿ ಡಿಫ್ರೆಂಟ್​ ಕಥೆ ಮತ್ತು ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ಚಿತ್ರತಂಡ ಬೈಕ್ ರೈಡಿಂಗ್​ನ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು, ನವೆಂಬರ್​ನಲ್ಲಿ ದ್ವಿತೀಯ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೀತಿದೆಯಂತೆ.

ವರ್ಲ್ಡ್ ಫೇಮಸ್​ ಲವರ್​ ಫಸ್ಟ್ ಲುಕ್​ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅರ್ಜುನ್​ ರೆಡ್ಡಿ ಮತ್ತು ಲವರ್​ ಬಾಯ್​ ಇಮೇಜ್​ನಿಂದ ಹೊರಬನ್ನಿ ಅನ್ನೋ ಸಲಹೆಗಳನ್ನ ಫ್ಯಾನ್ಸ್​ಗಳೇ ನೀಡಿದ್ರು. ಹೀಗಾಗಿ ವಿಜಯ್​ ಮುಂದಿನ ಚಿತ್ರದಲ್ಲಿ ಬೈಕ್​ ರೈಡರ್​ ಆಗಿ ಕಾಣಿಸಿಕೊಳ್ತಿದ್ದಾರೆ. ಇದು ವಿಜಯ್​ ಸಿನಿಜರ್ನಿಯಲ್ಲಿ ಡಿಫರೆಂಟ್ ರೋಲ್ ಹೊಂದಿರೋ ಸಿನಿಮಾ. ಸದ್ದಿಲ್ಲದೇ ಚಿತ್ರದ ಶೂಟಿಂಗ್​ ಕೂಡ ನಡೀತಿದೆ.

 ವರ್ಷಾಂತ್ಯದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ವರ್ಲ್ಡ್ ಫೇಮಸ್ ಲವರ್ ಚಿತ್ರ ತೆರೆಗೆ ಬರೋ ಸಾಧ್ಯತೆ ಇದೆ. ಈ ಸಿನಿಮಾ ರಿಲೀಸ್ ಆದ್ಮೇಲೆ ಬೈಕ್​ ರೈಡರ್​ ಅವತಾರದಲ್ಲಿ ವಿಜಯ್​ ಕಮಾಲ್​ ಮಾಡೋಕೆ ರೆಡಿ ಆಗ್ತಿದ್ದಾರೆ. ಈ ಚಿತ್ರವನ್ನ ಆನಂದ್​ ಅಣ್ಣಾ ಮಲೈ ಡೈರೆಕ್ಟ್ ಮಾಡ್ತಿದ್ದು, ಚಿತ್ರದ ಫಸ್ಟ್ ಲುಕ್​ ಹೇಗಿರಲಿದೆ. ಚಿತ್ರದ ಕಥೆ ಹೇಗಿರಲಿದೆ ಅನ್ನೋ ಕುತೂಹಲ ಹುಟ್ಟು ಹಾಕಿದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more