Valentines Day Special- ತ್ರಿ‘ವಿಕ್ರಮ’ನಿಗೆ ಇಡೀ ವಾರ ಪ್ರೇಮೋತ್ಸವ!

ಫೆಬ್ರವರಿ 14 – ಪ್ರೇಮಿಗಳ ದಿನ ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ. ಒಂದ್ ಲೆಕ್ಕದಲ್ಲಿ ಆ ದಿನ ಲವ್ವರ್ಸ್‌ಗೆ ಹಬ್ಬ. ಟೂ ವೇ ಲವರ್‌ಗೆ ಔಟಿಂಗ್‌ಗೆ ಹೋಗೋ ಆತುರ. ಒನ್‌ ವೇ ಲವರ್‌ಗೆ ಪ್ರೇಮ ನಿವೇದನೆ ಮಾಡೋ ಕಾತರ. ಬ್ರೇಕಪ್‌ ಮಾಡಿಕೊಂಡವರಿಗೆ ‘ಅಂತರ’ದ ಆಗಾಧ ನೋವು. ಅದೆಲ್ಲಾ ಬಿಡಿ..ಒಬ್ಬೊಬ್ಬರದ್ದು ಒಂದೊಂದು ಕಥೆ. ಯಾರುಯಾರಿಗೆ.. ಏನೂ ಅಂಥಾ ಹೇಳೋದು. ಅವರವರ ಕಥೆ ಅವ್ರೇ ಬರ್ಕೋಬೇಕು.

ನಾವ್ ಈಗ ಏನ್‌ ಹೇಳೋಕೆ ಹೊರಟಿದ್ದೀವಿ ಅಂದ್ರೆ ಕೇವಲ ಫೆ. 14 ಮಾತ್ರ ಸೆಲಬ್ರೇಶನ್ ಡೇ ಅಲ್ಲ. ಅದಕ್ಕೂ ಒಂದು ವಾರ ಮುನ್ನವೇ ಪ್ರೇಮಾಚರಣೆ ಶುರುವಾಗುತ್ತದೆ. ಅದು ಸಾಂಗೋಪಾಂಗವಾಗಿ ಕೆಳಗಿನಂತೆ ನೆರವೇರುತ್ತದೆ..
ಫೆ.7 -ರೋಸ್ ಡೇ
ಫೆ.8 -ಪ್ರಪೋಸ್ ಡೇ
ಫೆ.9 -ಚಾಕೋಲೇಟ್ ಡೇ
ಫೆ.10 -ಟೆಡ್ಡಿ ಡೇ
ಫೆ.11 -ಪ್ರಾಮಿಸ್‌ ಡೇ
ಫೆ.12 -ಕಿಸ್ ಡೇ
ಫೆ.13-ಫೆ.14 :ವ್ಯಾಲೆಂಟೈನ್‌ ಡೇ

ಹೀಗಾಗಿ ಒಂದು ವಾರ ಕಾಲ ಪ್ರೇಮೋತ್ಸವ ನಡೆಯುತ್ತದೆ. ಇದು ಸ್ಯಾಂಡಲ್‌ವುಡ್‌ನ ತ್ರಿವಿಕ್ರಮನಿಗೆ ಚೆನ್ನಾಗಿಯೇ ಗೊತ್ತು. ಈಗಾಗಲೇ ಲವ್‌ ಶೂಟಿಂಗ್‌ನಲ್ಲಿರೋ ತ್ರಿವಿಕ್ರಮ ವ್ಯಾಲೆಂಟೈನ್‌ ಡೇ ಆಚರಿಸ್ತಿದ್ದಾನೆ. ಒಂದೊಂದು ದಿನ ಒಂದೊಂದು ಪೋಸ್ಟರ್‌ ಮೂಲಕ ಪ್ರೇಕ್ಷಕರ ಮುಂದೆ ಪ್ರತ್ಯಕ್ಷನಾಗ್ತಿದ್ದಾನೆ.

ಪ್ರತಿಯೊಂದು ದಿನವೂ ವಿಭಿನ್ನವಾದ ಪೋಸ್ಟರ್‌ ರಿಲೀಸ್ ಮಾಡೋ ಮೂಲಕ ಲವ್‌ ಉತ್ಸವ ಆಚರಿಸ್ತಿದ್ದಾನೆ ತ್ರಿವಿಕ್ರಮ. ಈ ಪೋಸ್ಟರ್‌ನಲ್ಲಿ ನಾಯಕ ವಿಕ್ರಮ್‌, ನಾಯಕಿ ಆಕಾಂಕ್ಷ ಶರ್ಮಾ ಮತ್ತು ಕಾಮಿಡಿ ಸ್ಟಾರ್ ಚಿಕ್ಕಣ್ಣ ಇದ್ದಾರೆ. ಚಿತ್ರೀಕರಣ ಹಂತದಲ್ಲಿರೋ ತ್ರಿವಿಕ್ರಮ ಚಿತ್ರಕ್ಕೆ ಸಹನಾ ಮೂರ್ತಿ ಆ್ಯಕ್ಷನ್‌ ಕಟ್ ಹೇಳ್ತಿದ್ದಾರೆ. ಸೋಮಣ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ಕ್ರೇಜ್’ ಹುಟ್ಟಿಸ್ತಿದೆ ವಿಕ್ರಮ್ ರವಿಚಂದ್ರನ್ ಚೊಚ್ಚಲ ಚಿತ್ರ ತ್ರಿವಿಕ್ರಮ!

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!