ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲಿಲ್ಲವೆಂದು ಯೋಧನ ಕುಟುಂಬಕ್ಕೆ ಬಹಿಷ್ಕಾರ

ಬೆಳಗಾವಿ: ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಸವದತ್ತಿ ತಾಲೂಕಿನ ತೋಟಗಟ್ಟಿಯಲ್ಲಿ ನಡೆದಿದೆ. ಯೋಧ ವಿಠ್ಠಲ್ ಜಮ್ಮು‌ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, ಮುಂದಿನ ತಿಂಗಳು ಯೋಧ ವಿಠ್ಠಲ್ ಹಾಗೂ ಆತನ ಸಹೋದರನ ನಿಶ್ಚಿತಾರ್ಥ ನಿಗದಿಯಾಗಿದೆ. ಬಹಿಷ್ಕಾರ ಹಾಕಿರುವ ಹಿನ್ನೆಲೆ ಯಾವ ಅರ್ಚಕರೂ ಸಹ ಮುಂದೆ ಬರುತ್ತಿಲ್ಲ. ಹೀಗಾಗಿ ಎಲ್ಲಿ ಮದುವೆ ನಿಂತು ಹೋಗುತ್ತೋ ಎಂಬ ಆತಂಕದಲ್ಲಿ ಯೋಧನ ಕುಟುಂಬವಿದೆ.

ಯೋಧನ ಕುಟುಂಬಕ್ಕೆ ಮೂರು ವರ್ಷಗಳ ಹಿಂದೆಯೇ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದರು. 2017ರಲ್ಲೇ ಈ ಬಗ್ಗೆ ಬೆಳಗಾವಿ ಡಿಸಿ, ಎಸ್‌ಪಿ, ಪೊಲೀಸ್ ಕಮಿಷನರ್‌ಗೆ ಮನವಿ ಮಾಡಿದ್ದರು. ಮಾಹಿತಿ ನೀಡಿದ್ರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.

ಮದುವೆ ನಿಲ್ಲುವ ಆತಂಕದಲ್ಲಿ ಯೋಧನ ಕುಟುಂಬ:
ಕಳೆದ ಮೂರು ವರ್ಷದಿಂದ ನಮಗೆ ಬಹಿಷ್ಕಾರ ಹಾಕಿದ್ದಾರೆ. ಮುಂದಿನ ತಿಂಗಳು ನನ್ನ ಮಗನ ಮದುವೆ ನಿಶ್ಚಯವಾಗಿದೆ. ಆದ್ರೆ ಮದುವೆ ಕಾರ್ಯಕ್ಕೆ ಅರ್ಚಕರು ಸಹ ಸಿಗುತ್ತಿಲ್ಲ. ಗ್ರಾಮದ ಹಿರಿಯರು ಸಹ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಯೋಧ ವಿಠ್ಠಲ ತಂದೆ ಮಲ್ಲಿಕಾರ್ಜುನ ಕಟಕೋಳ ಟಿವಿ9 ಜೊತೆ ಮಾತನಾಡುವ ಸಂದರ್ಭದಲ್ಲಿ ಕಣ್ಣೀರಿಟ್ಟರು.

ಯೋಧನ ನಿವಾಸಕ್ಕೆ ತಹಶೀಲ್ದಾರ್ ಭೇಟಿ:
ಯೋಧ ವಿಠ್ಠಲ ಕಟಕೋಳ ನಿವಾಸಕ್ಕೆ ರಾಮದುರ್ಗ ತಹಶೀಲ್ದಾರ್ ಗಿರೀಶ್ ಸ್ವಾಧಿ ಭೇಟಿ ನೀಡಿ ಯೋಧನ ಕುಟುಂಬಸ್ಥರ ಜೊತೆ ಮಾತನಾಡಿ ವಿಚಾರದ ಕುರಿತು ಮಾಹಿತಿ ಪಡೆದರು. ಯೋಧನ ತಂದೆ ಮಲ್ಲಿಕಾರ್ಜುನ ಕಟಕೋಳ, ತಾಯಿ ಶಾಂತಾ ಕಟಕೋಳ ತಹಶಿಲ್ದಾರ್ ಗಿರೀಶ್ ಸ್ವಾಧಿ ಮುಂದೆ ಕಣ್ಣೀರಿಟ್ಟು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಗ್ರಾಮಸ್ಥರ ಸಮ್ಮುಖದಲ್ಲಿ ಹಾಗೂ ಸ್ಥಳೀಯ ಅರ್ಚಕರ ಮೂಲಕ ಮಗನ ಮದುವೆ ನಡೆಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!