ಹುಳು ಬಿದ್ದ ಧಾನ್ಯಗಳಿಂದಲೇ ಮಕ್ಕಳಿಗೆ ಆಹಾರ, ಅಂಗನವಾಡಿ ಸಿಬ್ಬಂದಿ ಮೇಲೆ ಆಕ್ರೋಶ

ಧಾರವಾಡ: ಹುಳುಗಳು ತಿಂದ ಧಾನ್ಯಗಳಿಂದಲೇ ಅಡುಗೆ ಮಾಡಿ ಅಂಗನವಾಡಿ ಮಕ್ಕಳಿಗೆ ಸಿಬ್ಬಂದಿ ಬಡಿಸಿದ್ದಾರೆ. ಅಂಗನವಾಡಿ ಸಂಖ್ಯೆ 2 ರಲ್ಲಿ ಮಕ್ಕಳಿಗೆ ನೀಡಿದ ಆಹಾರವು ಬರೀ ಹುಳುಗಳಿಂದ ತುಂಬಿದೆ ಎಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನಾಗನೂರ್ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಳುಗಳು ಬಿದ್ದಿರುವ ಹಾಳಾದ ಧಾನ್ಯಗಳನ್ನು ಬಳಸಿ ಮಕ್ಕಳಿಗೆ ಅಡುಗೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಅದರಲ್ಲೂ ತೊಗರೆ ಬೆಳೆಯಲ್ಲಿ ವಿಪರೀತವಾದ ನುಶಿ ಹುಳುಗಳು ಇದ್ದು, ಮಕ್ಕಳಿಗೆ ಇಲ್ಲಿನ ಸಿಬ್ಬಂದಿ ಇದೆ ಅಡುಗೆಯನ್ನು ನೀಡಿದ್ದಾರೆ. ಇಂತಹ ಆಹಾರದಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತೆ ಎನ್ನುವ ಆತಂಕ ಪೋಷಕರಲ್ಲಿ ಹೆಚ್ಚಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿ ವಿಡಿಯೋ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more