ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿಗೆ ಈ ಬೌಲರ್​​ಗಳೆಂದ್ರೆ ನಡುಕ!?

ವಿರಾಟ್ ಕೊಹ್ಲಿ.. ಸದ್ಯ ವಿಶ್ವ ಕ್ರಿಕೆಟ್​ನ ರನ್ ಸಾಮ್ರಾಟ. ಕೊಹ್ಲಿ ಅಪ್ರತಿಮ ಬ್ಯಾಟಿಂಗ್​ಗೆ ದಿಗ್ಗಜರ ದಾಖಲೆಗಳು ಚಿಂದಿ ಚಿಂದಿಯಾಗ್ತಿದೆ. ಕೊಹ್ಲಿಯ ಕ್ಲಾಸ್ ಅಂಡ್ ಮಾಸ್ ಪರ್ಫಾಮೆನ್ಸ್​ಗೆ ವಿಲವಿಲ ಒದ್ದಾಡೋ ಬೌಲರ್​ಗಳು, ವಿಕೆಟ್ ಪಡೆಯೋದಕ್ಕೆ ಇನ್ನಿಲ್ಲದ ಹರಸಾಹಸವನ್ನ ಪಡ್ತಿದ್ದಾರೆ.

ವಿರಾಟ್ ಕೊಹ್ಲಿ ಕ್ರೀಸ್​ಗಿಳಿದ್ರೆ ಸಾಕು, ಎದುರಾಳಿಗಳಿಗೆ ನಡುಕ ಶುರುವಾಗುತ್ತೆ. ಕೊಹ್ಲಿಯ ರನ್ ರೌದ್ರಾವತಾರಕ್ಕೆ ಎದುರಾಳಿಗಳು ಉಡೀಸ್ ಆಗಿಹೋಗ್ತಾರೆ. ಅಷ್ಟರಮಟ್ಟಿಗೆ ಆನ್​ಫೀಲ್ಡ್​ನಲ್ಲಿ ವಿರಾಟ್ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಪ್ರತಿಯೊಂದು ಸರಣಿಯಲ್ಲೂ ಒಂದಿಲ್ಲೊಂದು ದಾಖಲೆಗಳನ್ನ ಸೃಷ್ಟಿಸೋ ವೀರಾಧಿವೀರ ಕೊಹ್ಲಿ.

ಆದ್ರೀಗ ಇದೇ ವಿರಾಟ್ ಕೊಹ್ಲಿಗೆ ಇದೀಗ ಇದೊಂದು ಭಯ ಕಾಡೋದಕ್ಕೆ ಶುರುವಾಗಿದೆ. ನ್ಯೂಜಿಲೆಂಡ್ ನೆಲದಲ್ಲಿ ಅಬ್ಬರಿಸಬೇಕಿದ್ದ ಕೊಹ್ಲಿ, ಆ ಭಯದಿಂದಾಗಿ ಮಂಕಾಗಿ ಹೋಗಿದ್ದಾರೆ. ಹಾಗಾದ್ರೆ, ವಿಶ್ವ ಕ್ರಿಕೆಟ್​ನ ನಂಬರ್ 1ಬ್ಯಾಟ್ಸ್​ಮನ್ ಕೊಹ್ಲಿಯನ್ನ ಕಾಡ್ತಿರೋ ಆ ಭಯ ಯಾವುದು..? ಕಿವೀಸ್ ಸರಣಿಯಲ್ಲೂ ಕಿಂಗ್ ಕೊಹ್ಲಿ ಡಲ್ ಆಗಿರೋದ್ಯಾಕೆ ಅನ್ನೋದು ಇಲ್ಲಿದೆ ನೋಡಿ.

ರನ್ ಮಷಿನ್ ಕೊಹ್ಲಿಗೆ ಲೆಗ್ ಸ್ಪಿನ್ನರ್ಸ್ ಕಂಡ್ರೆ ಭಯ?
ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಬ್ಯಾಟ್ಸ್​ಮನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಇದೇ ಕೊಹ್ಲಿಗೀಗ ಲೆಗ್ ಸ್ಪಿನ್ನರ್​ಗಳು ಕಂಡ್ರೆ ಭಯನಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಯಾಕಂದ್ರೆ, ಪ್ರಸಕ್ತ ನ್ಯೂಜಿಲೆಂಡ್ ಸರಣಿಯಲ್ಲಿ ಲೆಗ್ ಸ್ಪಿನ್ನರ್​ಗಳ ಓವರ್​ನಲ್ಲಿ ವಿರಾಟ್ ರನ್ ಗಳಿಸೋದಕ್ಕೆ ಪರದಾಡ್ತಿದ್ದಾರೆ. ಹ್ಯಾಮಿಲ್ಟನ್​ನ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ವಿರಾಟ್, ಲೆಗ್ ಸ್ಪಿನ್ನರ್ ಇಶ್ ಸೋದಿ ಗೂಗ್ಲಿಗೆ ಬಲಿಯಾಗಿದ್ರು.

ಕುತೂಹಲದ ವಿಷ್ಯ ಅಂದ್ರೆ, ಇದೊಂದೇ ಪಂದ್ಯದಲ್ಲಿ ಕೊಹ್ಲಿ ಲೆಗ್ ಸ್ಪಿನ್ನರ್​ಗೆ ಬಲಿಯಾಗಿದ್ರೆ, ಇಷ್ಟೊಂದು ಸುದ್ದಿಯಾಗ್ತಿರಲಿಲ್ಲ. ಆದ್ರೆ, ವಿರಾಟ್ ಕಳೆದ 4ಏಕದಿನ ಪಂದ್ಯಗಳ ಪೈಕಿ ಮೂರು ಬಾರಿ ಲೆಗ್ ಸ್ಪಿನ್ನರ್​ಗೆ ವಿಕೆಟ್ ಒಪ್ಪಿಸಿದ್ದಾರೆ.

ಆಸಿಸ್ ಸರಣಿಯಲ್ಲಿ ಕೊಹ್ಲಿಯನ್ನ ಕಾಡಿದ್ದ ಜಂಪಾ!
ಕಳೆದ ತಿಂಗಳು ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ ವಿರಾಟ್, ವೀಕ್​ನೆಸ್ ಕ್ರಿಕೆಟ್ ಲೋಕಕ್ಕೆ ಗೊತ್ತಾಯ್ತು. ಆಸಿಸ್​ನ ಸ್ಪಿನ್ ಮಾಂತ್ರಿಕ ಌಡಮ್ ಜಂಪಾ ಬೌಲಿಂಗ್​ನಲ್ಲಿ ಕೊಹ್ಲಿ ಎರಡು ಬಾರಿ ವಿಕೆಟ್ ಒಪ್ಪಿಸಿದ್ರು. ವಾಂಖೆಡೆ ಏಕದಿನ ಪಂದ್ಯದಲ್ಲಿ 16ರನ್​ಗಳಿಸಿ ಜಂಪಾಗೆ ಬಲಿಯಾಗಿದ್ದ ಕೊಹ್ಲಿ, ರಾಜ್​ಕೋಟ್​ನಲ್ಲಿ 78ರನ್​ಗಳಿಸಿದ್ದಾಗ ಜಂಪಾ ಜಾದೂಗೆ ಔಟಾಗಿದ್ರು.

ಕೊಹ್ಲಿ ವಾಂಖೆಡೆ ಮತ್ತು ರಾಜ್​ಕೋಟ್​ನಲ್ಲಿ ಮಾತ್ರವಲ್ಲ. ಒಟ್ಟು 7 ಬಾರಿ ಅಡಮ್ ಜಂಪಾ ಬೌಲಿಂಗ್​ನಲ್ಲೇ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರೆ. ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಕೊಹ್ಲಿಯನ್ನ ಹೇಗೆ ಬಲಿಪಡೆಯಬೇಕು ಅನ್ನೋದ್ರ ಬಗ್ಗೆ, ಜಂಪಾ ಬಹಿರಂಗವಾಗೇ ಹೇಳಿದ್ರು. ಕೊಹ್ಲಿ ಕ್ರೀಸ್​ಗೆ ಬಂದು ಸೆಟಲ್ ಆಗೋಕ್ಕಿಂತ ಮುಂಚೆ, ಲೆಗ್ ಸ್ಪಿನ್ನರ್​ಗಳಿಗೆ ಪರದಾಡ್ತಾರಂತೆ. ಆ ಸಮಯದಲ್ಲಿ ಲೆಗ್ ಸ್ಪಿನ್ನರ್​ಗೆ ಬೌಲಿಂಗ್ ನೀಡಿದ್ರೆ, ಕೊಹ್ಲಿ ವಿಕೆಟ್ ಪಡೆಯಬಹುದು ಅಂತಾ ಜಂಪಾ ಸೀಕ್ರೆಟ್ ಬಿಚ್ಚಿಟ್ಟಿದ್ದ.

17 ಬಾರಿ ಲೆಗ್ ಸ್ಪಿನ್ನರ್​ಗೆ ವಿಕೆಟ್ ಒಪ್ಪಿಸಿರೋ ಕೊಹ್ಲಿ!ವಿರಾಟ್ ಕೊಹ್ಲಿಗೆ ಲೆಗ್ ಸ್ಪಿನ್ನರ್​ಗಳ ಭಯ ಕಾಡೋದಕ್ಕೆ ಶುರುವಾಗಿದ್ದೇ, 2018ರ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ. ಲೆಗ್ ಸ್ಪಿನ್ನರ್ ಅದಿಲ್ ರಶೀದ್ ಸ್ಪಿನ್ ಮೋಡಿಗೆ ಬಲಿಯಾಗಿದ್ದ ಕೊಹ್ಲಿ, ಮೊದಲ ಬಾರಿ ತಮ್ಮ ವೀಕ್​ನೆಸ್ ಬಿಟ್ಟುಕೊಟ್ಟಿದ್ರು. ವಿರಾಟ್ ಇದುವರೆಗೂ 185ಬಾರಿ ಔಟಾಗಿದ್ದಾರೆ. ಆದ್ರೆ, ಲೆಗ್ ಸ್ಪಿನ್ನರ್​ಗಳಿಗೆ ಒಟ್ಟು 17ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಇದುವರೆಗೂ ಯಾವೊಬ್ಬ ಬ್ಯಾಟ್ಸ್​ಮನ್ ಕೂಡ, ಲೆಗ್ ಸ್ಪಿನ್ನರ್​ಗೆ ಇಷ್ಟೊಂದು ಬಾರಿ ಔಟಾಗಿಲ್ಲ. ಆದ್ರೆ, ಕೊಹ್ಲಿ 17ಬಾರಿ ಅತೀ ಹೆಚ್ಚು ಬಾರಿ ಲೆಗ್ ಸ್ಪಿನ್ನರ್​ಗೆ ಬಲಿಯಾಗಿದ್ದಾರೆ.

ಇನ್ನೂ ಕಲರ್​ಫುಲ್ ಟೂರ್ನಿ ಐಪಿಎಲ್​ನಲ್ಲೂ ವಿರಾಟ್ ಲೆಗ್ ಸ್ಪಿನ್ನರ್​ಗೆ ಒಟ್ಟು 10ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಅದ್ರಲ್ಲೂ ರಾಜಸ್ಥಾನ ರಾಯಲ್ಸ್ ತಂಡ ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿಗೆ, ವಿರಾಟ್ ಬಲಿಯಾಗಿರೋದೇ ಹೆಚ್ಚು. ಒಟ್ನಲ್ಲಿ ವಿಶ್ವ ಕ್ರಿಕೆಟ್​ನ ರನ್ ಮಷೀನ್​ಗೆ ಲೆಗ್ ಸ್ಪಿನ್ನರ್​ಗಳ ಭಯ ಕಾಡೋದಕ್ಕೆ ಶುರುವಾಗಿದೆ. ಕೊಹ್ಲಿ ಆದಷ್ಟು ಬೇಗನೇ ಈ ವೀಕ್​ನೆಸ್​ನಿಂದ ಹೊರಬರಬೇಕಿದೆ.

 

Related Tags:

Related Posts :

Category:

error: Content is protected !!