ಅದು ನನ್ನ ವೈಯಕ್ತಿಕ ವಿಚಾರ, ನೀವು ಹಾಗೆಲ್ಲ ನೋಡುವಂತಿಲ್ಲ -CCB ತಂಡಕ್ಕೆ ಖನ್ನಾ ಆವಾಜ್​

ಬೆಂಗಳೂರು: ಜಟ್ಟಿ ಬಿದ್ರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ತಾನು ಅರೆಸ್ಟ್​ ಆಗಿದ್ರೂ A3 ಆರೋಪಿ ವಿರೇನ್​ ಖನ್ನಾಗೆ ದುಡ್ಡಿನ ದರ್ಪ ಇನ್ನೂ ಇಳಿದಿಲ್ಲ ಅನ್ನಿಸುತ್ತೆ. ಇದೀಗ, CCB ಅಧಿಕಾರಿಗಳಿಗೆ A3 ವಿರೇನ್ ಖನ್ನಾ ಕಿರಿಕ್ ಕೊಡ್ತಿದ್ದಾನಂತೆ.
ಬಂಧನವಾಗಿ ಇಷ್ಟು ದಿನವಾದರೂ ಖನ್ನಾ ತನ್ನ ಮೊಬೈಲ್​ ಅನ್​ಲಾಕ್​ ಮಾಡಿಕೊಡುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಅದು ನನ್ನ ವೈಯಕ್ತಿಕ ವಿಚಾರ. ನೀವು ಹಾಗೆಲ್ಲ ನೋಡುವಂತಿಲ್ಲವೆಂದು ಅಧಿಕಾರಿಗಳಿಗೆ ಕಿರಿಕ್​ ಕೊಡುತ್ತಿದ್ದನಂತೆ. CCB ಪೊಲೀಸರ ಸೂಚನೆಗೆ ಕೇರ್​ ಮಾಡದ ಖನ್ನಾ ಎಷ್ಟೇ ಮನವಿ ಮಾಡಿದ್ರು ತನಿಖಾಧಿಕಾರಿಗೆ ಸಹಕರಿಸುತ್ತಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ವಿರೇನ್​ ಖನ್ನಾ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಬಿಟ್ಟಿದ್ದ.

ಕೊನೆಗೆ, ಕೋರ್ಟ್ ಮೂಲಕ ಸೂಚನೆ ನೀಡಿಸಿದ CCB ಪೊಲೀಸರು ಆತನಿಗೆ ಮೊಬೈಲ್​ ಫೋನ್​ ಅನ್​ಲಾಕ್​ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಖನ್ನಾ ಮೊಬೈಲ್​ ಅನ್​ಲಾಕ್​ ಮಾಡಿಕೊಟ್ಟಿದ್ದು ಸದ್ಯ FSL ತಜ್ಞರಿಂದ ವಿರೇನ್ ಖನ್ನಾ​ ಮೊಬೈಲ್ ಪರಿಶೀಲನೆ ನಡೆಸಲಾಗುತ್ತಿದೆ.

ಇದೀಗ, ಕಳೆದ ಎರಡು ದಿ‌ನಗಳಿಂದ ಪರಿಶೀಲನೆ ನಡೆಸಲಾಗುತ್ತಿದ್ದು ಖನ್ನಾ ಮೊಬೈಲ್​ನಲ್ಲಿ ಪ್ರಮುಖ ಮಾಹಿತಿಗಳು, ದೊಡ್ಡ ದೊಡ್ಡವರ ಫೋನ್ ನಂಬರ್​ಗಳು ಪತ್ತೆಯಾಗಿದೆ. ಜೊತೆಗೆ, WhatsApp ಚಾಟ್ ಕೂಡ ರಿಟ್ರೀವ್ ಮಾಡುತ್ತಿರುವ ತಜ್ಞರಿಗೆ ಖನ್ನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಮಾಹಿತಿಯನ್ನು ಇಟ್ಟುಕೊಂಡು ಅಧಿಕಾರಿಗಳು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲಿದ್ದಾರೆ ಎಂದು ಹೇಳಲಾಗಿದೆ.

Related Tags:

Related Posts :

Category: