ವಿವೇಕ್ ಒಬೆರಾಯ್​ಗೂ ಡ್ರಗ್ಸ್ ಲಿಂಕ್ ಇದೆ: NCB ಸಮನ್ಸ್ ನೀಡಲಿ- ಗೃಹ ಸಚಿವ

ಮುಂಬೈ: ಸ್ಯಾಂಡಲ್​ವುಡ್​ ಜೊತೆ ಮಾದಕವಸ್ತು ಜಾಲ ತಳುಕು ಹಾಕಿಕೊಂಡಿರುವ ಪ್ರಕರಣದಲ್ಲಿ ಆರೋಪಿ 6 ಆದಿತ್ಯ ಆಳ್ವಾಗಾಗಿ ಆತನ ಭಾವ, ನಟ ವಿವೇಕ್ ಒಬೆರಾಯ್ ಮನೆಯಲ್ಲಿ ಬೆಂಗಳೂರು CCB ಪೊಲೀಸರು ನಿನ್ನೆ ಶೋಧ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಇದೀಗ ನಟ ವಿವೇಕ್ ಒಬೆರಾಯ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ವಿವೇಕ್ ವಿರುದ್ಧ ಅನಿಲ್ ದೇಶಮುಖ್ ಗಂಭೀರ ಆರೋಪ ಮಾಡಿದ್ದಾರೆ.

ವಿವೇಕ್ ಒಬೆರಾಯ್ ಗೂ ಡ್ರಗ್ಸ್ ಲಿಂಕ್ ಇದೆ. ವಿವೇಕ್ ಒಬೆರಾಯ್-ಸಂದೀಪ್ ಸಿಂಗ್ ಗೂ ಸಂಬಂಧ ಇದೆ. NCB ಇವಬ್ಬರಿಗೂ ಸಮನ್ಸ್ ನೀಡಿ, ವಿಚಾರಣೆ ನಡೆಸಲಿ ಎಂದು ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ. ಸಂದೀಪ್ ಸಿಂಗ್, ಮೋದಿ ಜೀವನ ಚರಿತ್ರೆ ಸಿನಿಮಾ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ವಿವೇಕ್ ಒಬೆರಾಯ್, ಮೋದಿ ಪಾತ್ರದಲ್ಲಿ ಅಭಿನಯಿಸಿದ್ದರು ಎಂಬುದು ಗಮನಾರ್ಹ.

Related Tags:

Related Posts :

Category:

error: Content is protected !!