ಭೂಮಿಯೊಳಗಿಂದ ಬಂದ ವಿಚಿತ್ರ ಸದ್ದು: 2 ಮನೆಗಳ ಗೋಡೆ ಕುಸಿತ, ಯಾವೂರಲ್ಲಿ?

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಇಂದ್ರಪಾಡ ಹೊಸಳ್ಳಿ ಗ್ರಾಮದಲ್ಲಿ ಭೂಮಿಯಿಂದ ಭಾರಿ ಸದ್ದು ಕೇಳಿಬಂದಿದ್ದು, ಶಬ್ದದ ತೀವ್ರತೆಗೆ ಗ್ರಾಮದ 2 ಮನೆಗಳ ಗೋಡೆ ಕುಸಿದಿದೆ.

ಕಳೆದ ರಾತ್ರಿ ಮತ್ತು ಮುಂಜಾನೆ ಭೂಮಿಯಿಂದ ಬಾರಿ ಸದ್ದು ಕೇಳಿಬಂದಿದ್ದು, ಕೆಲ ವರ್ಷಗಳ ಹಿಂದೆ ಕೂಡಾ ಇದೇ ರೀತಿ ಸದ್ದು ಕೇಳಿ ಬಂದಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸತತ ಒಂದು ವಾರದಿಂದ ಭೂಮಿಯೊಳಗಿಂದ ವಿಚಿತ್ರ ಸದ್ದು ಕೇಳಿ ಬಂದಿತ್ತು ಎಂದಿದ್ದಾರೆ. ಈ ಬಗ್ಗೆ ವಿವರಣೆ ನೀಡಿರುವ ಅಧಿಕಾರಿಗಳು ಹೆಚ್ಚು ಮಳೆಯಾದಾಗ ಈ ರೀತಿಯ ಸದ್ದು ಬರುತ್ತದೆ ಎಂದಿದ್ದಾರೆ.

Related Tags:

Related Posts :

Category: