9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ‌ ಸಂಜಯನಿಗೆ ಗಲ್ಲು ‌ಶಿಕ್ಷೆ

  • sadhu srinath
  • Published On - 15:28 PM, 28 Oct 2020

ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲಾ‌ ಸೆಷನ್ಸ್ ಕೋರ್ಟ್​​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವಾರಂಗಲ್ ಜಿಲ್ಲಾ ನ್ಯಾಯಾಲಯದ‌‌ ಸೆಷನ್ಸ್ ಜಡ್ಜ್‌ ಜಯಕುಮಾರ್ ಅವರು ವಾರಂಗಲ್ ಬಳಿಯ ಗೊರ್ರಕುಂಟನಲ್ಲಿ 9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ ಬಿಹಾರ ಮೂಲದ‌ ಸಂಜಯ ಕುಮಾರ್​ ಯಾದವ್ ಎಂಬಾತನಿಗೆ ಗಲ್ಲು ‌ಶಿಕ್ಷೆ ವಿಧಿಸಿದ್ದಾರೆ.
ವಾರಂಗಲ್ ಬಳಿಯ ಗೊರಕುಂಟದಲ್ಲಿ ನಡೆದಿದ್ದ ಘಟನೆಯಿದು. ಅಪರಾಧಿ ಸಂಜಯ ಕುಮಾರ್ ​ಯಾದವ್, ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಆ 9 ಮಂದಿಗೆ ತಿನ್ನಿಸಿದ್ದ. ನಿದ್ದೆಯಲ್ಲಿದ್ದ ಆ 9 ಮಂದಿಯನ್ನೂ ಒಬ್ಬೊಬ್ಬರಾಗಿ ಬಾವಿ ವರೆಗೂ ಎಳೆದೊಯ್ದು, ಬಾವಿಗೆ ಹಾಕಿದ್ದ. ಇದೀಗ, ಸಂಜಯ ಕುಮಾರನಿಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಮೃತರ ಸಂಬಂಧಿಕರು, ಮೃತರ ಪರ ವಕೀಲರು ಸಂತಸ ವ್ಯಕ್ತಪಡಿಸಿದ್ದಾರೆ.