ಟ್ರೈನಿ ವೈದ್ಯೆಗೆ ಲೈಂಗಿಕ ಕಿರುಕುಳ, ವಾರ್ಡ್​ ಬಾಯ್​ಗೆ ಸಿಕ್ತು ಪೊಲೀಸ್ ‘ಟ್ರೀಟ್​ಮೆಂಟ್’

ಮುಂಬೈ: ವಾಣಿಜ್ಯ ನಗರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಳೆಯ ವಾರ್ಡ್​ ಬಾಯ್​ ಆತ. ವಯಸ್ಸು ಇನ್ನೂ 30 ದಾಟಿಲ್ಲ. ಅವನಿಗಿರುವ ರೋಗ ಎಂಥದ್ದು ಅಂದ್ರೆ ಆಸ್ಪತ್ರೆಯಲ್ಲಿ ಮಹಿಳಾ ಸಿಬ್ಬಂದಿಯ ಮೇಲೆ ಕಾಮಮೃಗದಂತೆ ಬೀಳುವುದು.

ಮೊನ್ನೆಯೂ ಹಾಗೆಯೇ ಆಗಿದೆ. ಯುವ ಟ್ರೈನಿ ವೈದ್ಯೆಯೊಬ್ಬರು ಆಸ್ಪತ್ರೆಯಲ್ಲಿ ರೌಂಡ್ಸ್​ನಲ್ಲಿದ್ದರು. ಈ ಕಾಮುಕ ವಾರ್ಡ್​ ಬಾಯ್​ ಅದೆಲ್ಲಿದ್ದನೋ ಆಕೆಯ ಮೇಲೆ ಬಿದ್ದಿದ್ದಾನೆ. ಕಾಮ ಚೇಷ್ಟೆ ಆರಂಭಿಸಿದ್ದಾನೆ. ತಕ್ಷಣ ಎಚ್ಚೆತ್ತ ಆ ವೈದ್ಯೆ ಅದು ಹೇಗೋ ಅವನಿಂದ ತಪ್ಪಿಸಿಕೊಂಡಿದ್ದಾರೆ. ಮುಂದೆ ಪ್ರಕರಣ ಸ್ಥಳೀಯ ಪೊಲೀಸ್​ ಠಾಣೆ ಮೆಟ್ಟಿಲೇರಿದೆ.

ಪೊಲೀಸರು ಆರೋಪಿಯನ್ನು ನೋಡಿದವರೆ.. ಇವನಿಗೆ ಪಾಸ್ಟ್ ಹಿಸ್ಟರಿಯೂ ಇದೆ. ಹೀಗೆ ಅನೇಕ ಬಾರಿ ಮಹಿಳೆಯರ ಮೇಲೆ ಇಂತಹ ಕುಕೃತ್ಯಗಳನ್ನು ಎಸಗಿದ್ದಾನೆ. ಮುಂದೆ ನಾವು ಇವನನ್ನು ವಿಚಾರಿಸಿಕೊಳ್ಳುತ್ತೇವೆ, ಬಿಡಿ ಎಂದಿದ್ದಾರೆ. ಜೊತೆಗೆ ಅವನನ್ನು ಅರೆಸ್ಟ್ ಮಾಡಿ, ಇದೀಗ ಪೊಲೀಸ್ ಟ್ರೀಟ್​ಮೆಂಟ್​ ಕೊಡ್ತಿದ್ದಾರೆ.

Related Posts :

Category:

error: Content is protected !!

This website uses cookies to ensure you get the best experience on our website. Learn more