ಇಡೀ ದಿನ ಕುಳಿತುಕೊಂಡೇ ಕೆಲಸ ಮಾಡುತ್ತೀರಾ? ಈ ಟಿಪ್ಸ್ ಫಾಲೋ ಮಾಡಿ

ನೀವು ಕಛೇರಿಯಲ್ಲಿ ಇಡೀ ದಿನ ಕುಳಿತುಕೊಂಡು ಕೆಲಸ ಮಾಡುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು. 

ಸಾಕಷ್ಟು ಹೊತ್ತಿನ ವರೆಗೆ ಕುಳಿತುಕೊಳ್ಳುವುದು ಬೆನ್ನು ನೋವಿನಿಂದ ಹಿಡಿದ ಬೊಜ್ಜಿನ ವರೆಗೆ ಸಾಕಷ್ಟು ಸಮಸ್ಯೆಗಳನ್ನು ತರುತ್ತದೆ.

ಆದ್ದರಿಂದ ನಿಮ್ಮ ಆಫೀಸ್​​​ ಅವಧಿಯಲ್ಲಿ ಈ ಸಿಂಪಲ್​​​​ ಯೋಗ ಭಂಗಿಗಳನ್ನು ಅಭ್ಯಾಸಿಸಿ.

ಪ್ರತೀ 30 ನಿಮಿಷಗಳಿಗೆ ಒಂದು ಬಾರಿ ಎದ್ದು ಸ್ವಲ್ಪ ಹೊತ್ತು ನಡೆಯಿರಿ. 

ಕುಳಿತುಕೊಂಡಲ್ಲೇ ಕಾಲುಗಳನ್ನು ನೇರವಾಗಿ ಚಾಚಿ ಕೆಲವು ನಿಮಿಷಗಳ ಕಾಲ ಹಿಡಿದಿಟ್ಟುಕೊಳ್ಳಿ. 

ನಿಮ್ಮ ಎದೆ ಹಾಗೂ ತೋಳುಗಳನ್ನು ಗುರಿಯಾಗಿಟ್ಟುಕೊಂಡು ಮೇಜಿನ ಮೇಲೆ ಪುಷ್​​​ ಅಪ್​​ ಮಾಡಿ.

ಕುರ್ಚಿಯಲ್ಲೆ ಕುಳಿತುಕೊಂಡು ಬೈಸಿಕಲ್​​​ ಪೆಡಲಿಂಗ್​​​​ ಮಾಡುವ ರೀತಿಯಲ್ಲಿ ಕೆಲ ನಿಮಿಷಗಳ ವರೆಗೆ ಮಾಡಿ.