ಸರಳವಾದ ಸ್ವರೂಪ (Format)ನಲ್ಲಿ ಇರಲಿ ರೆಸ್ಯೂಮ್ ತಯಾರಿಸುವಾಗ ನೆನಪಿಟ್ಟುಕೊಳ್ಳಬೇಕಾದ ಅತ್ಯಂತ ಪ್ರಮುಖ ನಿಯಮವೆಂದರೆ ಸರಿಯಾದ ಫಾರ್ಮೆಟ್ ನಲ್ಲಿ ಸಿದ್ದಪಡಿಸುವುದು.

ಪ್ರಸ್ತುತ ಮತ್ತು ಸಂಬಂಧಿತ ಮಾಹಿತಿಯೊಂದಿಗೆ ಪ್ರಾರಂಭಿಸಿ ರೆಸ್ಯೂಮ್ ಬರೆಯುವಾಗ, ಕಾಲಾನುಕ್ರಮವನ್ನು ಅನುಸರಿಸುವುದು ಮುಖ್ಯವಾಗಿದೆ, ನಿಮ್ಮ ಅನುಭವವನ್ನು ನೀವು ವಿವರಿಸಿದಾಗ ನಿಮ್ಮ ಪ್ರಸ್ತುತ ಕೆಲಸದಿಂದ ಪ್ರಾರಂಭಿಸಿ.

ವ್ಯಾಕರಣ ತಪ್ಪುಗಳು ನಿಮ್ಮ ರೆಸ್ಯೂಮ್ ನಲ್ಲಿ ವ್ಯಾಕರಣ ದೋಷಗಳು ಇರದಂತೆ ಗಮನಹರಿಸಿ. ಇಲ್ಲದಿದ್ದರೇ ಇದು ನಿಮ್ಮ ಬೇಜವಾಬ್ದಾರಿ ಮತ್ತು ಅಸಡ್ಡೆ ತೋರಿಸುತ್ತದೆ.

ಚಿಕ್ಕದಾಗಿ ಮತ್ತು ಚೊಕ್ಕದಾಗಿರಲಿ ನಿಮ್ಮ ಸ್ವವಿವರವು ಎರಡು ಪುಟಗಳಿಗಿಂತ ಹೆಚ್ಚಿರಬಾರದು.ಆರಂಭಿಕ ಕೆಲಸಗಳನ್ನು ಕಡಿತಗೊಳಿಸಿ ಮತ್ತು ಅನಗತ್ಯ ಅಥವಾ ಅಪ್ರಸ್ತುತ ಕೆಲಸದ ಕರ್ತವ್ಯಗಳನ್ನು ತೆಗೆದು ಹಾಕಿ.

ರೆಸ್ಯೂಮ್ ಅನ್ನು ವ್ಯವಸ್ಥಿತವಾಗಿರಿಸಿಕೊಳ್ಳಿ ರೆಸ್ಯೂಮ್ ಅನ್ನು ಅಪ್ಡೇಟ್ ಮಾಡುತ್ತಿರಿ. ಓದಲು ಸುಲಭವಾದ ಮತ್ತು ಸರಳವಾದುದನ್ನು ಆರಿಸಿಕೊಳ್ಳಿ. ನೋಡಲು ಬಹಳ ಸರಳವಾಗಿರಲ್ಲಿ. ಬಿಳಿ ಹಿನ್ನೆಲೆಯಲ್ಲಿ ಕಪ್ಪು ಪಠ್ಯವಿರಲಿ

ಸತ್ಯ ಮತ್ತು ಅಂಕಿಅಂಶ ಅರ್ಹತೆಗಳ ಸಾರಾಂಶದೊಂದಿಗೆ ನಿಮ್ಮ ರೆಸ್ಯೂಮ್ ಅಪ್ಡೇಟ್ ಗಳನ್ನು ಪ್ರಾರಂಭಿಸಿ. ನಿಮ್ಮ ಸಾಧನೆಗಳು ಅಂಕಿಅಂಶಗಳಿಂದ ಕೂಡಿರಲಿ