ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಬೆಳೆಸುವ 5 ಸಲಹೆಗಳು

ಬಾಲ್ಯದಲ್ಲೇ ಮಕ್ಕಳು ಓದುವುದನ್ನು ಅಭ್ಯಾಸ ಮಾಡಿದರೆ, ಅದು ಅವರ ಮುಂದಿನ ಜೀವನಕ್ಕೆ ಸಹಾಯವಾಗುವುದರ ಜೊತೆಗೆ ಅವರ ಮಾತಿನ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.

ರಸ ಪ್ರಶ್ನೆ:  ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರ ನೀಡಿದವರಿಗೆ ಬಹುಮಾನವನ್ನು ನೀಡುವುದು.

ಕಾದಂಬರಿ ಆಧಾರಿತ ಚಿತ್ರ:  ಮಕ್ಕಳು ಸಿನಿಮಾವನ್ನು ನೋಡಲು ಇಷ್ಟಪಡುತ್ತಾರೆ. ಅವರು ಓದಿದ ಕಥೆಯ ಸಿನಿಮಾವನ್ನು ತೋರಿಸಿ

ಆಟದ ಮನೆ:  ಮನೆಯ ಒಂದು ಭಾಗದಲ್ಲಿ ಒಂದಿಷ್ಟು ನಿಮ್ಮ ಮಕ್ಕಳ ಇಷ್ಟದ ಪುಸ್ತಕಗಳನ್ನಿಟ್ಟು ಅವರಿಗೆ ಆಯ್ಕೆ ಮಾಡಿಕೊಳ್ಳಲು ಅವಕಾಶಕೊಡಿ.

ಬುಕ್ ಕ್ಲಬ್:  ಸಮಾನ ಮನಸ್ಕರೊಂದಿಗೆ ಮಕ್ಕಳನ್ನು ಓದಲು ಪ್ರೋತ್ಸಾಹಿಸಿ. ಓದಿದ ಪುಸ್ತಕದ ಕುರಿತು ಬೇರೆ ಮಕ್ಕಳೊಂದಿಗೆ ಚರ್ಚೆ ಮಾಡಲು ಅವಕಾಶ ಕೊಡಿ 

ರಂಗಭೂಮಿ:  ಮಕ್ಕಳಿಗೆ ನಾಟಕವನ್ನು ತೋರಿಸಿ, ಆದರೆ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ಕೊಡಿ.