‘72 ಹೂರೇ’ ಚಿತ್ರದಲ್ಲಿ ಬೆಂಗಳೂರಿನ ಬೆಡಗಿ

'ದಿ ಕೇರಳ ಸ್ಟೋರಿ' ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ತೆರೆಗೆ  ಬರಲು ಸಿದ್ಧವಾಗಿದೆ.

ಭಯೋತ್ಪಾದನೆಗೆ ಮುಸ್ಲಿಂ ಯುವಕರನ್ನು ತಳ್ಳುವ ಇಸ್ಲಾಮಿಕ್​​​​ ತೀವ್ರವಾದ ಹೊಂದಿರುವ ‘72 ಹೂರೇ’ ಚಿತ್ರದ ಟೀಸರ್​​ ಬಿಡುಗಡೆಯಾಗಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್​​ ಪುರಾನ್​ ಸಿಂಗ್​​​​ ಈ ಸಿನಿಮಾ ನಿರ್ದೇಶಿಸಿದ್ದಾರೆ.

ಈ ಚಿತ್ರದ ಮತ್ತೊಂದು ವಿಶೇಷತೆಯೆಂದರೆ ನಾಯಕಿಯಾಗಿ ಬೆಂಗಳೂರಿನ ಬೆಡಗಿ ಕಾಣಿಸಿಕೊಂಡಿದ್ದಾರೆ.

ಮೂಲತಃ ಬೆಂಗಳೂರಿನವರಾದ ಸರು ಮೈನಿ (Saru Maini) ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 

27 ಏಪ್ರಿಲ್ 1988ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಈಕೆ ಬಾಲಿವುಡ್​​​ನಲ್ಲಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಬಾಲಿವುಡ್​​​ನ 'ಆಂಥೋನಿ ಕೌನ್ ಹೈ?' ಚಿತ್ರದಲ್ಲಿ  ಸೋನು ನಿಗಮ್​​​​​ ಅವರೊಂದಿಗೆ ಹಾಡಿದ್ದಾರೆ.

ಜುಲೈ 7 ರಂದು ‘72 ಹೂರೇ’ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದೆ.