ದಂಪತಿಗಳು ಪ್ರತಿ ದಿನ ಅನುಸರಿಸಬೇಕಾದ 8 ನಿಯಮಗಳು

ಸಂವಹನ ದಂಪತಿಗಳು ಎಲ್ಲಾ ಭಾವನೆಗಳ ಬಗ್ಗೆ ಪ್ರತಿದಿನ ಮುಕ್ತವಾಗಿ ಮಾತನಾಡುವ ನಿಯಮ ಮಾಡಿಕೊಳ್ಳಿ

ಕೇಳುವುದು ನಿಮ್ಮ ಸಂಗಾತಿಯ ಮಾತುಗಳನ್ನು ಕೇಳಲು ಅಭ್ಯಾಸ ಮಾಡಿ, ಏನು ಹೇಳುತ್ತಾರೆಂಬುದನ್ನು ಅರ್ಥಮಾಡಿಕೊಳ್ಳಿ

ಗೌರವ ನಿಮ್ಮ ಸಂಗಾತಿಯನ್ನು ಗೌರವಿಸಿ. ಅವರು ಹೇಳುವುದನ್ನು ನೀವು ಕೆಲವೊಮ್ಮೆ ಒಪ್ಪದಿದ್ದರೂ ಸಹ ಗೌರವವನ್ನು ನೀಡಿ

ಗಡಿ ನೀವು ದಂಪತಿಗಳಾಗಿದ್ದರೂ ನಿಮಗೆಂದು ನೀವು ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮ ಸಂಗಾತಿಯ ಎಲ್ಲಾ ಕೆಲಸಗಳಲ್ಲೂ ನೀವು ಮೂಗು ತೂರಿಸುವ ಅಗತ್ಯವಿಲ್ಲ.

ಸಮಯ ಪ್ರತಿ ದಿನ ಕನಿಷ್ಠ 10 ನಿಮಿಷ ಒಬ್ಬರಿಗೊಬ್ಬರು ಸಮಯ ಮಾಡಿಕೊಳ್ಳಿ, ಮುಕ್ತವಾಗಿ ಮಾತನಾಡಿ 

ಬೆಂಬಲ ನಿಮ್ಮ ಸಂಗಾತಿಯ ಸುಖ-ದುಃಖಗಳಲ್ಲಿ ಭಾಗಿಯಾಗಿ. ಎಂತಹ ಸಮಯದಲ್ಲೂ ಅವರ ಬೆನ್ನೆಲುಬಾಗಿ ನಿಲ್ಲಿ.

ಕ್ಷಮೆ ತಪ್ಪು ಮಾಡುವುದು ಸಹಜ. ನಿಮ್ಮ ತಪ್ಪಿದ್ದಲ್ಲಿ ಒಪ್ಪಿಕೊಳ್ಳಿ ಮತ್ತು ನಿಮ್ಮ ಸಂಗಾತಿಯ ತಪ್ಪನ್ನು ಕ್ಷಮಿಸುವು ಗುಣವನ್ನು ಬೆಳೆಸಿಕೊಳ್ಳಿ

ನಗೆ ನಗು ದಾಂಪತ್ಯ ಜೀವನದ ಮುಖ್ಯ ಭಾಗ. ಒಬ್ಬರನ್ನೊಬ್ಬರು ನಗಿಸುವುದನ್ನು ಮರೆಯಬೇಡಿ