ಶಾರುಖ್ ಖಾನ್​​​ಗೆ ಜೊತೆಯಾದ ರಶ್ಮಿಕಾ ಮಂದಣ್ಣ?

ಬಾಲಿವುಡ್​​ ಕಿಂಗ್​​ ಶಾರುಖ್​​​ ಖಾನ್​​​ ಜೊತೆ ನಟಿಸಬೇಕು ಎಂಬುದು ಸಾಕಷ್ಟು ನಟಿಯರ ಕನಸು.

ಇದೀಗಾ ಶಾರುಖ್ ಖಾನ್ ಜೊತೆ ನಟಿಸುವ ಅದೃಷ್ಟ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ.

ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಹವಾ ಸೃಷ್ಟಿಸಿರುವ ರಶ್ಮಿಕಾ.

ಶಾರುಖ್ ಖಾನ್ ಜೊತೆ ರಶ್ಮಿಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್​​ ಆಗಿದೆ. 

ಬಾಲಿವುಡ್​​​​​ನ ರಾಜ್ ಫಿಲ್ಮ್ಸ್ ನಿರ್ಮಾಣದ ಜಾಹೀರಾತಿನಲ್ಲಿ ಶಾರುಖ್ ಖಾನ್​​​ಗೆ ರಶ್ಮಿಕಾ ಜೊತೆಯಾಗಿದ್ದಾರೆ.

ಸದ್ಯ ಕಿರಿಕ್​​​​ ಬೆಡಗಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್​​​ನಲ್ಲೂ ಅದೃಷ್ಟದ ಬಾಗಿಲು ತೆರೆದಿದೆ.

ಪುಷ್ಪ 2 ಸಿನಿಮಾದ ಜೊತೆಗೆ ಸಾಲು ಸಾಲು ಸಿನಿಮಾದ ಶೂಟಿಂಗ್​​ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ

ರಶ್ಮಿಕಾ ನಟನೆಯ ಮೊದಲ ಸಿನಿಮಾ ಆಕೆಯ ಸಿನಿ ಬದುಕಿಗೆ ದೊಡ್ಡ ಯಶಸ್ಸನ್ನು ತಂದುಕೊಟ್ಟಿದೆ.