ಹಿಂಬದಿ ಮುಟ್ಟಿ ಹಿಂಸಿಸಲಾಯ್ತು: ಟಿವಿ ನಟಿ ಅವಿಕಾ ಗೋರ್ ಆರೋಪ

18 JUNE 2024

Author : Manjunatha

ಅವಿಕಾ ಗೌರ್ ಹಿಂದಿ ಟಿವಿ ಜಗತ್ತಿನ ಜನಪ್ರಿಯ ನಟಿ, ಹಲವು ವರ್ಷಗಳಿಂದ ಅವರು ಧಾರಾವಾಹಿಗಳ ನಟಿ.

ಟಿವಿ ನಟಿ ಅವಿಕಾ ಗೋರ್

‘ಬಾಲಿಕಾ ವಧು’, ‘ಸಸುರಾಲ್ ಸಿಮರ್ ಕಾ’, ಸೇರಿದಂತೆ ಕೆಲವು ಹಿಟ್ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಹಿಟ್ ಧಾರಾವಾಹಿಗಳ ನಟಿ

ಅವಿಕಾ ಗೋರ್ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ತಮ್ಮ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.

ಲೈಂಗಿಕ ದೌರ್ಜನ್ಯದ ಬಗ್ಗೆ

ಕಜಕಿಸ್ತಾನದಲ್ಲಿ ಇವೆಂಟ್ ಒಂದರಲ್ಲಿ ಭಾಗವಹಿಸಿದ್ದಾಗ ತಮ್ಮ ಮೇಲೆ ಬಾಡಿಗಾರ್ಡ್​ನಿಂದ ಲೈಂಗಿಕ ದೌರ್ಜನ್ಯವಾಗಿತ್ತು ಎಂದಿದ್ದಾರೆ.

 ಕಜಕಿಸ್ತಾನದಲ್ಲಿ ಇವೆಂಟ್ 

ಇವೆಂಟ್​ನಲ್ಲಿ ಭಾಗಿಯಾಗಲು ವೇದಿಕೆ ಏರುತ್ತಿರುವಾಗ ಅಲ್ಲಿದ್ದ ಬಾಡಿಗಾರ್ಡ್ ನನ್ನ ಹಿಂಬದಿಯನ್ನು ಕೆಟ್ಟದಾಗಿ ಮುಟ್ಟಿದ ಎಂದಿದ್ದಾರೆ ಅವಿಕಾ.

ಬಾಡಿಗಾರ್ಡ್​ನಿಂದ ಕೃತ್ಯ

ಹೋಗಲಿ ಎಂದು ಸುಮ್ಮನಿದ್ದೆ ಆದರೆ ಎರಡನೇ ಬಾರಿ ಆತ ಹಾಗೆ ಮಾಡಿದಾಗ ನಾನು ಆತನ ಕೈ ಹಿಡಿದುಕೊಂಡೆ ಎಂದಿದ್ದಾರೆ.

  ಎರಡು ಬಾರಿ ಕೃತ್ಯ: ನಟಿ

ಆದರೆ ಆ ವ್ಯಕ್ತಿಗೆ ಹಿಂದಿ, ಇಂಗ್ಲೀಷ್ ಎರಡೂ ಭಾಷೆ ಬರುತ್ತಿರಲಿಲ್ಲ. ಆತನನ್ನು ಬೈದು ಬಿಟ್ಟುಬಿಟ್ಟೆ ಎಂದಿದ್ದಾರೆ ಅವಿಕಾ.

     ಹೋಗಲೆಂದು ಬಿಟ್ಟೆ

ಇದು ತಮಗೆ ಆದ ಬಹಳ ಕೆಟ್ಟ ಅನುಭವ ಎಂದಿರುವ ಅವಿಕಾ, ಅಂದಿನಿಂದ ನಾನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಎಚ್ಚರಿಕೆಯಿಂದ ಇರುತ್ತೇನೆ ಎಂದಿದ್ದಾರೆ.

 ಕೆಟ್ಟ ಅನುಭವ: ಅವಿಕಾ

ಇತ್ತೀಚೆಗೆ ಹಲವು ಬಾಲಿವುಡ್ ನಟಿಯರು, ಟಿವಿ ನಟಿಯರು ತಮ್ಮ ಮೇಲಾದ ದೌರ್ಜನ್ಯದ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.

ಹಲವು ನಟಿಯರ ಮಾತು

ರಶ್ಮಿಕಾ ಮಂದಣ್ಣ ಧರಿಸಿರುವ ಈ ಪಿಂಕ್ ಸೀರೆಯ ಬೆಲೆ ಎಷ್ಟು ಲಕ್ಷ ಊಹಿಸಬಲ್ಲಿರೇ?