ಚಿತ್ತಾರ ಸ್ಟಾರ್ ಅವಾರ್ಡ್ ಪಡೆದ ಸಂಭ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ

ಅವಾರ್ಡ್ ಪಡೆದ ಸಂತಸದ ಸುದ್ದಿಯನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡ ನಟಿ

ಸದ್ಯ ಸಿನಿಮಾಗಳಿಂದ ದೂರ ಉಳಿದುಕೊಂಡಿರುವ ನಟಿ ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ಟೀವ್​​ ಆಗಿದ್ದಾರೆ.

ಚಿತ್ತಾರ ಸ್ಟಾರ್ ಅವಾರ್ಡ್ ನೀಡಿ ಗೌರವಿಸಿದ್ದಕ್ಕಾಗಿ ಧನ್ಯವಾದಗಳು  ಎಂದು ನಟಿ ಇನ್ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ಎಲ್ಲಾ ಅದ್ಭುತ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ನಾನು ಈ ಅವಾರ್ಡ್ ಸಮರ್ಪಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ತನ್ನ ಅಭಿಮಾನಿಗಳಿಗೆ ಇನ್ನೂ ಮುಂದೇಯು ಮನರಂಜನೆ ನೀಡುತ್ತೇನೆ ಎಂದು ಭರವಸೆ ನೀಡುತ್ತೇನೆ ಹೇಳಿಕೊಂಡಿದ್ದಾರೆ.

ಸದ್ಯ ಹರ್ಷಿಕಾ ತಾಯ್ತ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.