‘ದಿ ಕೇರಳ ಸ್ಟೋರಿ’ ನಟಿಗೆ ಹುಟ್ಟು ಹಬ್ಬದ ಸಂಭ್ರಮ

ಇತ್ತೀಚೆಗಷ್ಟೇ ಬಿಡುಗಡೆಯಾದ  ‘ದಿ ಕೇರಳ ಸ್ಟೋರಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಅದಾ ಶರ್ಮಾ ಅವರ ನಟನೆ ಬಗ್ಗೆ ಮಾತನಾಡುತ್ತಿದ್ದಾರೆ.

ಅದಾ ಶರ್ಮಾ ಇಂದು(ಮೇ.11) ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

2015ರಲ್ಲಿ ತೆರೆಕಂಡಿದ್ದ ಪುನೀತ್​​ ರಾಜ್​​ ಕುಮಾರ್​​ ಅಭಿನಯದ ‘ರಣವಿಕ್ರಮ’ ಸಿನಿಮಾದಲ್ಲಿ ಅದಾ ಶರ್ಮಾ ನಟಿಸಿದ್ದರು.

2008ರಲ್ಲಿ ರಿಲೀಸ್ ಆದ ‘1920’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅದಾ ಶರ್ಮಾ.

ಇದೀಗಾ ತನ್ನ ನಟನೆಯಿಂದಲೇ ಮೋಡಿ ಮಾಡಿ ಬಹುಬೇಡಿಕೆ ನಟಿಯಾಗಿ ಹೊರ ಹೊಮ್ಮಿದ್ದಾರೆ.