ಅಜಿತ್ ಕುಮಾರ್ ಪುತ್ರಿಯ ಚಿತ್ರಗಳು ವೈರಲ್, ಚಿತ್ರರಂಗಕ್ಕೆ ಎಂಟ್ರಿ ಯಾವಾಗೆಂದ ಅಭಿಮಾನಿಗಳು

07 JUNE 2024

Author : Manjunatha

ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್, ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿರುವ ಅಜಿತ್, ವಿದೇಶದಲ್ಲಿ ಕುಟುಂಬದೊಟ್ಟಿಗೆ ನೆಲೆಸಿದ್ದಾರೆ.

    ನಟ ಅಜಿತ್ ಕುಮಾರ್

ಕುಟುಂಬವನ್ನು ಮೀಡಿಯಾದಿಂದ, ಚಿತ್ರರಂಗದಿಂದ ದೂರವೇ ಇಟ್ಟಿದ್ದಾರೆ ಅಜಿತ್ ಕುಮಾರ್. ಆದರೆ ಅವರ ಮಗಳ ಚಿತ್ರಗಳು ಇತ್ತೀಚೆಗೆ ವೈರಲ್ ಆಗಿವೆ.

   ಚಿತ್ರರಂಗದಿಂದ ದೂರ

ಇತ್ತೀಚೆಗೆ ವಿದೇಶದ ಶಾಪಿಂಗ್ ಮಾಲ್ ಒಂದರಲ್ಲಿ ಅಜಿತ್ ಅಭಿಮಾನಿಗಳು ಯಾರೋ ಅಜಿತ್ ಪುತ್ರಿ ಅನುಷ್ಕಾ ಕುಮಾರ್​ರ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟಿದ್ದಾರೆ.

   ಅನೊಷ್ಕಾ ಕುಮಾರ್​

ಅನುಷ್ಕಾರ ಚಿತ್ರ, ವಿಡಿಯೋ ನೋಡಿದ ಅಭಿಮಾನಿಗಳು, ಅನುಷ್ಕಾ ನಾಯಕಿಯ ಮುಖ ಲಕ್ಷಣ ಹೊಂದಿದ್ದಾರೆ ಎಂದು ಹೊಗಳುತ್ತಿದ್ದಾರೆ.

ನಾಯಕಿಯ ಮುಖ ಲಕ್ಷಣ

ಆದರೆ ಅಜಿತ್ ಕುಮಾರ್ ಮಕ್ಕಳಿಗೆ ಸಿನಿಮಾದ ಬಗ್ಗೆ ಆಸಕ್ತಿಯೇ ಇಲ್ಲವಂತೆ. ಅಲ್ಲದೆ ಅನುಷ್ಕಾ ಇನ್ನೂ ಕಾಲೇಜು ಶಿಕ್ಷಣದಲ್ಲಿ ತೊಡಗಿಕೊಂಡಿದ್ದಾರೆ.

     ಇನ್ನೂ ವಿದ್ಯಾರ್ಥಿನಿ

ಅಜಿತ್ ಹಾಗೂ ನಟಿ ಶಾಲಿಲಿಯ ಮೊದಲನೇ ಪುತ್ರಿ ಅನುಷ್ಕಾ, ಈ ಜೋಡಿಗೆ ಒಬ್ಬ ಮಗನೂ ಇದ್ದಾನೆ. ಆತನಿಗಿನ್ನೂ ಹತ್ತು ವರ್ಷ ವಯಸ್ಸು.

   ಅಜಿತ್, ನಟಿ ಶಾಲಿನಿಯ

ಅನುಷ್ಕಾ ಕುಮಾರ್​ ಆಗಾಗ್ಗೆ ಕುಟುಂಬದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರಷ್ಟೆ, ತಮ್ಮ ಸೋಷಿಯಲ್ ಮೀಡಿಯಾ ಖಾತೆಯನ್ನೂ ಸಹ ಅವರು ಹೊಂದಿಲ್ಲ.

 ಸೋಷಿಯಲ್ ಮೀಡಿಯಾ

ಸಾಧ್ಯವಾದಷ್ಟು ಮೀಡಿಯಾ, ಸಿನಿಮಾಗಳಿಂದ ದೂರವೇ ಇರುತ್ತಾರೆ ಅನುಷ್ಕಾ. ಅವರ ಕೆಲವು ಚಿತ್ರಗಳಷ್ಟೆ ಆನ್​ಲೈನ್​ನಲ್ಲಿವೆ.

   ಸಿನಿಮಾಗಳಿಂದ ದೂರ

ಅನುಷ್ಕಾ ಕುಮಾರ್​ಗೆ ಚಿಕ್ಕಮ್ಮ ಶಾಮಿಲಿ ಎಂದರೆ ಬಹಳ ಇಷ್ಟ, ಅಂದಹಾಗೆ ಈ ಶಾಮಿಲಿ ಮತ್ಯಾರು ಅಲ್ಲ ಕನ್ನಡಿಗರ ಮೆಚ್ಚಿನ ಬಾಲನಟಿ ಬೇಬಿ ಶಾಮಿಲಿ.

ಅನುಷ್ಕಾ ಚಿಕ್ಕಮ್ಮ ಶಾಮಿಲಿ

ಸರಳವಾದ ಬಟ್ಟೆ ತೊಟ್ಟು ಬಾಲಿವುಡ್ ಬೆಡಗಿ ಕೃತಿ ಸೆನನ್, ಬೆಲೆಯೂ ಹೆಚ್ಚೇನಲ್ಲ