ಪಪ್ಪಾಯಿ ಸೇವಿಸಿದ ನಂತರ ಈ ಆಹಾರಗಳನ್ನು ಸೇವಿಸಬೇಡಿ
ಜೀರ್ಣಕ್ರಿಯೆಗೆ ಸಹಾಯಕವಾಗುವ ಅತ್ಯುತ್ತಮ ಆಹಾರಗಳಲ್ಲಿ ಪಪ್ಪಾಯವು ಪ್ರಮುಖವಾದುದು.
ವಿಟಮಿನ್ ಸಿ, ಫೈಬರ್ನ ಸಮೃದ್ಧ ಮೂಲವಾಗಿರುವ ಪಪ್ಪಾಯವು ಕರುಳಿನ ಆರೋಗ್ಯವನ್ನು ಉತ್ತೇಜಿಸುವಲ್ಲಿ ಸಹಕಾರಿ.
ಆದರೆ ಪಪ್ಪಾಯಿ ಸೇವಿಸಿದ ನಂತರ ಎಂದಿಗೂ ನೀವು ಈ ಆಹಾರಗಳನ್ನು ಸೇವಿಸದಿರಿ.
ಹಾಲಿನ ಉತ್ಪನ್ನ ಎಂದಿಗೂ ಸೇವಿಸಬೇಡಿ, ಇದು ಅಜೀರ್ಣ, ಮಲಬದ್ದತೆ, ಹೊಟ್ಟೆ ಉಬ್ಬರ ಹಾಗೂ ಅತಿಸಾರಕ್ಕೆ ಕಾರಣವಾಗಬಹುದು.
ಪಪ್ಪಾಯಿ ಹಣ್ಣು ಸೇವಿಸಿದ ನಂತರ ಎಂದಿಗೂ ಮೀನು ಅಥವಾ ಸೀ ಫುಡ್ ಸೇವಿಸಬೇಡಿ.
ಮಸಾಲೆಯುಕ್ತ ಆಹಾರಗಳಿಂದ ದೂರವಿರಿ, ಇದು ಅಜೀರ್ಣ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಬಹುದು.
ಚಹಾದಲ್ಲಿರುವ ಕ್ಯಾಟೆಚಿನ್ ಅಂಶವು ಪಪ್ಪಾಯದೊಂದಿಗೆ ಮಿಶ್ರಣಗೊಂಡಾಗ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು.
ಮೊಟ್ಟೆ ಮತ್ತು ಪಪ್ಪಾಯಿ ಸಂಯೋಜನೆಯು ಮಲಬದ್ದತೆ, ವಾಂತಿ, ಅಜೀರ್ಣದಂತಹ ಸಮಸ್ಯೆಗೆ ಕಾರಣವಾಗಬಹುದು.