ಅರಿಶಿನ ಮಿಶ್ರಿತ ಹಾಲು ತ್ವಚೆಗೆ ಎಷ್ಟು ಸಹಾಯಕ ಗೊತ್ತಾ?
ಸಾಮಾನ್ಯವಾಗಿ ಕೆಮ್ಮಿನ ಶಮನಕ್ಕಾಗಿ ಅರಿಶಿನ ಮಿಶ್ರಿತ ಹಾಲು ಕುಡಿಯುವುದುಂಟು.
ಇದರ ಹೊರತಾಗಿಯೂ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿಯೂ ಅರಿಶಿನ ಮಿಶ್ರಿತ ಹಾಲು ಸಹಾಯಕವಾಗಿದೆ.
ವಯಸ್ಸಾದಂತೆ ಚರ್ಮದ ಕಾಲಜನ್ ಉತ್ಪಾದನೆಯೂ ಕಡಿಮೆಯಾಗುತ್ತಾ ಹೋಗುತ್ತದೆ.
ಕಾಲಜನ್ ಉತ್ಪಾದನೆ ಕಡಿಮೆಯಾದಂತೆ ಮುಖದಲ್ಲಿ ಸುಕ್ಕು, ಸೂಕ್ಷ್ಮ ರೇಖೆಗಳು ಹುಟ್ಟಿಕೊಳ್ಳಬಹುದು.
ಅರಿಶಿನ ಮಿಶ್ರಿತ ಹಾಲಿನಲ್ಲಿ ಉತ್ಕರ್ಷಣಾ ನಿರೋಧಕಗಳು ಸಮೃದ್ದವಾಗಿದೆ.
ಉತ್ಕರ್ಷಣಾ ನಿರೋಧಕಗಳು ತ್ವಚೆಗೆ ಆರೈಕೆ ನೀಡುವಲ್ಲಿ ಸಹಾಯಕವಾಗಿದೆ.
ಜೊತೆಗೆ ಅರಶಿನದಲ್ಲಿರುವ ಕರ್ಕ್ಯುಮಿನ್ ಅಂಶವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ರಕ್ತ ಪರಿಚಲನೆ ಸರಾಗವಾಗಿಯಾದರೆ ತ್ವಚೆಯಲ್ಲಿ ನೈಸರ್ಗಿಕವಾಗಿ ಕಾಂತಿ ಹೆಚ್ಚಾಗುತ್ತದೆ.