ಆಸ್ಕರ್ ಪ್ರಶಸ್ತಿ ಕಳೆದುಕೊಂಡ ಎಆರ್ ರೆಹಮಾನ್...?

ಸಂದರ್ಶನವೊಂದರಲ್ಲಿ, ಎ.ಆರ್. ರಹಮಾನ್ ಆಸ್ಕರ್ ಪ್ರಶಸ್ತಿ ಕಳೆದುಕೊಂಡಿರುವ ಬಗ್ಗೆ ಮಾತನಾಡಿದ್ದಾರೆ

ತನ್ನ ತಾಯಿಯ ಬಳಿಯೆ ತನ್ನ ಆಸ್ಕರ್ ಪ್ರಶಸ್ತಿಯನ್ನು ಸುರಕ್ಷಿತವಾಗಿ ಇಟ್ಟಿದ್ದು, ಅದರ ಬಗ್ಗೆ ವರ್ಷಗಟ್ಟಲೆ ಮರೆತು ಹೋಗಿದ್ದೆ ಎಂದು ಹೇಳಿದ್ದಾರೆ

ತಾಯಿ ಕರೀಮಾ ಬೇಗಂ ಅವರು ಡಿಸೆಂಬರ್ ನಲ್ಲಿ ನಿಧನರಾದ ನಂತರ ತಾಯಿ ಮನೆಯಿಂದ ತನ್ನ ಮನೆಗೆ ಆಸ್ಕರ್ ಪ್ರಶಸ್ತಿಗಳನ್ನು ತೆಗೆದುಕೊಂಡು ಹೋಗಲು ನಿರ್ಧರಿಸಿದಾಗ, ಅವರಿಗೆ ಬೀರು ನಲ್ಲಿ ಪ್ರಶಸ್ತಿಗಳು ಸಿಗಲಿಲ್ಲವಂತೆ

ಹೀಗಾಗಿ, ಪ್ರಶಸ್ತಿಗಳು ಕಳೆದು ಹೋಗಿದ್ದವು ಎಂದುಕೊಂಡರಂತೆ

ಆದರೆ, ಅವರ ಮಗ ಎಆರ್ ಅಮೀನ್ ಪ್ರಶಸ್ತಿಗಳು ಬೇರೆ ಬೀರುವಿನಲ್ಲಿವೆ ಎಂದು ಬಹಿರಂಗಪಡಿಸಿದ ನಂತರ ಅವರಿಗೆ ಬಹಳಷ್ಟು ಖುಷಿಯಾಯಿತು ಎಂದು ತಿಳಿಸಿದರು