ಅಡಿಕೆಗೆ ಬಂಪರ್ ಬೆಲೆ, ರೈತರ ಮೊಗದಲ್ಲಿ ಮಂದಹಾಸ  

20 September 2023

Pic credit - Google

ಭೂತಾನ್ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇದರಿಂದ ಅಡಿಕೆ ದರ ಕುಸಿಯುತ್ತದೆ ಎಂಬ ಭೀತಿ ಬೆಳೆಗಾರರನ್ನು ಆವರಿಸಿತ್ತು. 

ಭೂತಾನನಿಂದ ಅಡಿಕೆ ಆಮದು

Pic credit - Google

ಆದರೆ ಇದೀಗ ಅಡಿಕೆಗೆ ಭಾರಿ ಬೆಲೆ ಬಂದ ಹಿನ್ನೆಲೆಯಲ್ಲಿ ಮಲೆನಾಡಿನಲ್ಲಿ ಅಡಿಕೆ ಕೊಯ್ಲ ಬಿರುಸು ಗೊಂಡಿದೆ.

ಅಡಿಕೆಗೆ ಬಂಪರ ಬೆಲೆ 

Pic credit - Google

ಅಡಿಕೆ ನಾಡು ಎಂದೇ ಪ್ರಸಿದ್ದ ಪಡೆದ ದಾವಣಗೆರೆ ಜಿಲ್ಲೆಯ ಬಹುತೇಕ‌ ಅಡಿಕೆ ಬೆಳಗಾರರಲ್ಲಿ ಸಂಭ್ರಮ ‌ಮನೆ ಮಾಡಿದೆ.

ಅಡಿಕೆ ಬೆಳೆಗಾರರಿಗೆ ಸಂಭ್ರಮ

Pic credit - Google

ಹಳೆ ರಾಶಿ ಅಡಿಕೆ ಪ್ರತಿ ಕ್ಷಿಂಟಾಲ್​ಗೆ ಗರಿಷ್ಠ ದರ 50,379 ರೂ., ಕನಿಷ್ಠ ದರ 46,512 ರೂ. ಇದೆ.

ಹಳೆ ರಾಶಿ ಅಡಿಕೆ ದರ

Pic credit - Google

ಹೊಸ ರಾಶಿಗೆ ಅಡಿಕೆ ಪ್ರತಿ ಕ್ಷಿಂಟಾಲ್​ಗೆ ಗರಿಷ್ಠ ದರ 49,581 ರೂ. ಕನಿಷ್ಠ 42,051 ರೂ. ಪ್ರತಿ ಕ್ವಿಂಟಾಲ್​​ಗೆ ಸರಾಸರಿ 46,560 ರೂ. ಇದೆ 

ಹೊಸ ರಾಶಿಗೆ ಅಡಿಕೆ ದರ

Pic credit - Google

ಹಳೇ ಹಾಗೂ ಹೊಸ ರಾಶಿ ಅಡಿಕೆಯ ದರದಲ್ಲಿ ಅಂತರ ಕಂಡು ಬಂದಿಲ್ಲ. ಬಂಪರ್ ಬೆಲೆ ಬಂದ ಹಿನ್ನೆಲೆಯಲ್ಲಿ ಹೊಸ ರಾಶಿ ಅಡಿಕೆ ಇರುವ ರೈತರು ಅಡಿಕೆ ಮಾರಾಟಕ್ಕೆ ಮುಂದಾಗಿದ್ದಾರೆ. 

ಹಳೇ, ಹೊಸ ರಾಶಿ ಅಡಿಕೆ ದರದಲ್ಲಿ ಅಂತರವಿಲ್ಲ 

Pic credit - Google

ಈಗ ಕೇಂದ್ರ ಸರ್ಕಾರ ಆಮದು ಅಡಿಕೆಯ ಮೇಲೆ ಕ್ವಿಂಟಲ್‌ಗೆ 351 ರೂ. ಶುಲ್ಕ ವಿಧಿಸಿದ್ದು, ಸ್ಥಳೀಯ ತೆರಿಗೆಗಳು ಸೇರಿ 361 ರೂ. ಶುಲ್ಕವಾಗುತ್ತದೆ. 

ಆಮದು ಅಡಿಕೆಯ ಮೇಲೆ ಕ್ವಿಂಟಲ್‌ಗೆ ₹351

Pic credit - Google

ಆಮದು ಅಡಿಕೆಯಲ್ಲಿ ಗುಣಮಟ್ಟ ಇರುವುದಿಲ್ಲ. ಗುಟ್ಕಾ ಕಂಪನಿಯವರು ಗುಟ್ಕಾ ತಯಾರಿಸಲು ಹೆಚ್ಚಾಗಿ ಗುಣಮಟ್ಟದ ಅಡಿಕೆಯನ್ನು ಉಪಯೋಗಿಸುವುದರಿಂದ ದೇಶಿಯ ಅಡಿಕೆಗೆ ಬೇಡಿಕೆ ಹೆಚ್ಚಿದೆ.

ಆಮದು ಅಡಿಕೆಯಲ್ಲಿ ಗುಣಮಟ್ಟ ಇರುವುದಿಲ್ಲ

Pic credit - Google

ಸಾಮಾನ್ಯವಾಗಿ 45,000 ರೂ. ಅಡಿಕೆ ದರ ಸಿಕ್ಕರೂ ಆಡಿಕೆ ಬೆಳೆಗಾರರಿಗೆ ಉತ್ತಮ ದರ ಸಿಕ್ಕಂತಾಗುತ್ತದೆ. ಮೂರು ತಿಂಗಳಿಂದ ಅಡಿಕೆ ದರದಲ್ಲಿ ಸ್ಥಿರತೆ ಕಂಡಿದೆ.

ಬೆಳೆಗಾರರಿಗೆ ಉತ್ತಮ ದರ

Pic credit - Google