04-09-2023
334 ರನ್ಸ್: ಅಫ್ಘಾನ್ ಬಗ್ಗುಬಡಿದ ಬಾಂಗ್ಲಾದೇಶ
ಬಾಂಗ್ಲಾ vs ಅಫ್ಘಾನ್
ಭಾನುವಾರ ಲಾಹೋರ್'ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್'ನ 4ನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡ ಮುಖಾಮುಖಿ ಆಗಿತ್ತು.
ಬಾಂಗ್ಲಾಕ್ಕೆ 89 ರನ್ಸ್ ಜಯ
ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಾಂಗ್ಲಾದೇಶ 89 ರನ್ನುಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಬಹುತೇಕ ಸೂಪರ್-4 ಹಂತಕ್ಕೆ ತೇರ್ಗಡೆಯಾಗಿದೆ.
ಬಾಂಗ್ಲಾ 334 ರನ್ಸ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ನಿಗದಿತ 50 ಓವರ್'ಗಳಲ್ಲಿ 5 ವಿಕೆಟ್ ನಷ್ಟಕ್ಕೆ 334 ರನ್ ಕಲೆಹಾಕಿತು.
ಮೆಹ್ದಿ-ಶ್ಯಾಂಟೋ ಶತಕ
ಬಾಂಗ್ಲಾ ಪರ ಮೆಹ್ದಿ ಹಸನ್ 112 ರನ್ ಗಳಿಸಿದರೆ, ಶ್ಯಾಂಟೋ 104 ರನ್ ಕಲೆಹಾಕಿದರು. ನಾಯಕ ಶಕಿಬ್ 18ಎಸೆತಗಳಲ್ಲಿ ಅಜೇಯ 32 ರನ್ ಚಚ್ಚಿದರು.
ಅಫ್ಘಾನ್ ಆಲೌಟ್
335 ರನ್ನುಗಳ ಟಾರ್ಗೆಟ್ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 44.3 ಓವರುಗಳಲ್ಲಿ 245 ರನ್ನಿಗೆ ಆಲೌಟ್ ಆಯಿತು. ಇಬ್ರಾಯೀಂ (75) ಮತ್ತು ಹಶ್ಮತುಲ್ಲ (51) ಮಾತ್ರ ಹೋರಾಡಿದರು.
ಟಸ್ಕಿನ್ 4 ವಿಕೆಟ್
ಬಾಂಗ್ಲಾದೇಶ ಪರ ಮಾರಕ ದಾಳಿ ಸಂಘಟಿಸಿದ ಟಸ್ಕಿನ್ ಅಹ್ಮದ್ 8.3 ಓವರುಗಳಲ್ಲಿ 4 ವಿಕೆಟ್ ಕಿತ್ತರು. ಇಸ್ಲಾಂ ಕೂಡ 3 ವಿಕೆಟ್ ಪಡೆದರು.
ಇಂದು ಯಾವ ಪಂದ್ಯ?
ಏಷ್ಯಾಕಪ್ 2023 ರಲ್ಲಿ ಇಂದು ಭಾರತ ಹಾಗೂ ನೇಪಾಳ ತಂಡಗಳು ಮುಖಾಮುಖಿ ಆಗಲಿದೆ. ಪಲ್ಲಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಭಾರತ ಗೆಲ್ಲಲೇ ಬೇಕು
ನೇಪಾಳ ವಿರುದ್ಧ ಗೆದ್ದರೆ ಅಥವಾ ಪಂದ್ಯ ರದ್ದಾದರೆ ಮಾತ್ರ ಭಾರತ ಸೂಪರ್-4 ಹಂತಕ್ಕೆ ಪ್ರವೇಶಿಸುತ್ತದೆ. ಎಲ್ಲಾದರು ಸೋತರೆ ಟೂರ್ನಿಯಿಂದ ಹೊರಬೀಳಲಿದೆ.
ಇನ್ನಷ್ಟು ಓದಿ