ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ನೋಡಿ

02-09-2023

ಇಂದು ಏಷ್ಯಾಕಪ್'ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಪಲ್ಲಕೆಲೆ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಲಾಗಿದೆ.

ಭಾರತ-ಪಾಕ್ ಮುಖಾಮುಖಿ:

ಈ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಹೇಗಿರಬಹುದು ಎಂಬುದು ರೋಚಕತೆ ಸೃಷ್ಟಿಸಿದೆ. ಇಲ್ಲಿದೆ ನೋಡಿ ಟೀಮ್ ಇಂಡಿಯಾ ಸಂಭಾವ್ಯ ಆಟಗಾರರ ಪಟ್ಟಿ.

ಭಾರತದ ಪ್ಲೇಯಿಂಗ್ XI:

ನಾಯಕ ರೋಹಿತ್ ಶರ್ಮಾ ಹಾಗೂ ಶುಬ್'ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ರೋಹಿತ್-ಗಿಲ್ ಓಪನರ್:

ರಾಹುಲ್ ಅಲಭ್ಯತೆಯಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪರ್ ಜವಾಬ್ದಾರಿ ಹೊರಲಿದ್ದು, ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಇದೆ.

ಇಶಾನ್ ಕಿಶನ್ 3ನೇ ಕ್ರಮಾಂಕ?:

ಸದಾ ಮೂರನೇ ಕ್ರಮಾಂಕದಲ್ಲಿ ಆಡುವ ಕೊಹ್ಲಿ ತಮ್ಮ ಸ್ಥಾನವನ್ನು ತ್ಯಾಗ ಮಾಡಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ನಂತರದ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳಬಹುದು.

ಕೊಹ್ಲಿಗೆ ನಾಲ್ಕನೇ ಕ್ರಮಾಂಕ:

ಆಲ್ರೌಂಡರ್'ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಪ್ಲೇಯಿಂಗ್ ಇಲೆವೆನ್'ನಲ್ಲಿ ಇರುವುದು ಖಚಿತ.

ಜಡೇಜಾ-ಹಾರ್ದಿಕ್ ಆಲ್ರೌಂಡರ್:

ಭರ್ಜರಿ ಫಾರ್ಮ್'ನಲ್ಲಿರುವ ಕುಲ್ದೀಪ್ ಯಾದವ್ ಪ್ರಮುಖ ಸ್ಪಿನ್ನರ್ ಆಗಿ ಕಾಣಿಸಲಿದ್ದಾರೆ. ಅಕ್ಷರ್ ಪಟೇಲ್ ಆಯ್ಕೆ ಕೂಡ ತಂಡಕ್ಕಿದೆ.

ಸ್ಪಿನ್ ಆಯ್ಕೆ:

ಪ್ರಮುಖ ವೇಗಿಯಾಗಿ ಬುಮ್ರಾ ಇದ್ದು, ಇವರಿಗೆ ಮೊಹಮ್ಮದ್ ಶಮಿ ಮತ್ತು ಸಿರಾಜ್ ಸಾಥ್ ನೀಡಲಿದ್ದಾರೆ

ಬುಮ್ರಾ ನೇತೃತ್ವದಲ್ಲಿ ವೇಗಿಗಳ ಪಡೆ: