14 September 2023

Pic Credit: BCCI

ಏಷ್ಯಾ ಕಪ್​ನಲ್ಲಿ ಭಾರತೀಯ ಕ್ರಿಕೆಟ್ ಆಟಗಾರರಿಗೆ ಸಿಗುವ ಸಂಭಾವಣೆ ಎಷ್ಟು?

ಫೈನಲ್​ನಲ್ಲಿ ಭಾರತ

ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023 ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶ ಖಾತ್ರಿಪಡಿಸಿಕೊಂಡಿದೆ.

Pic Credit: BCCI

ಪಂದ್ಯಗಳೆಷ್ಟು?

ಏಷ್ಯಾಕಪ್​ನಲ್ಲಿ ಸೂಪರ್ 4 ಪ್ರವೇಶಿಸಿದ ತಂಡಗಳು ಒಟ್ಟಾರೆ ಕನಿಷ್ಠ 5 ಪಂದ್ಯಗಳನ್ನು ಅಡುತ್ತವೆ. ಫೈನಲ್ ಪ್ರವೇಶಿಸಿದರೆ 6 ಪಂದ್ಯಗಳಾಗುತ್ತವೆ.

Pic Credit: BCCI

ಸಂಭಾವನೆ ಎಷ್ಟು?

ಏಷ್ಯಾಕಪ್​ನಲ್ಲಿ ಒಬ್ಬ ಆಟಗಾರ 5 ಪಂದ್ಯ ಆಡಿದರೆ 30 ಲಕ್ಷ ರೂ ಗಳಿಸಬಹುದು. ಫೈನಲ್ ಪಂದ್ಯ ಸೇರಿದರೆ ಸಂಭಾವನೆ ಇನ್ನೂ ಹೆಚ್ಚಾಗುತ್ತದೆ.

Pic Credit: BCCI

ವಾರ್ಷಿಕ ಸಂಬಳ

ಟೂರ್ನಿ ಪಂದ್ಯಗಳಲ್ಲಿ ಸಿಗುವ ಮ್ಯಾಚ್ ಫೀ ಜೊತೆಗೆ ಪ್ರತೀ ಆಟಗಾರನಿಗೆ ವಾರ್ಷಿಕವಾಗಿ ಪ್ರತ್ಯೇಕ ಸಂಬಳ ಸಿಗುತ್ತದೆ.

Pic Credit: BCCI

ಶ್ರೇಣಿಗಳು

ಎ+, ಎ, ಬಿ ಮತ್ತು ಸಿ ಎಂದು ಅಟಗಾರರನ್ನು 4 ಶ್ರೇಣಿಗಳಾಗಿ ವರ್ಗೀಕರಿಸಿ ಗುತ್ತಿಗೆ ನೀಡುತ್ತದೆ ಬಿಸಿಸಿಐ. ಪ್ರತೀ ಶ್ರೇಣಿಗೆ ಬೇರೆ ಸಂಭಾವನೆ ಇರುತ್ತದೆ.

Pic Credit: BCCI

ಎ ಮತ್ತು ಎ+ನವರಿಗೆ

ಎ+ ಶ್ರೇಣಿಯ ಗುತ್ತಿಗೆ ಪಡೆದ ಆಟಗಾರರಿಗೆ ಒಂದು ವರ್ಷದಲ್ಲಿ 7 ಕೋಟಿ; ಎ ಶ್ರೇಣಿಯವರಿಗೆ 5 ಕೋಟಿ ರೂ ಸಂಭಾವನೆ ಸಿಗುತ್ತದೆ.

Pic Credit: BCCI

ಬಿ ಮತ್ತು ಸಿ ಶ್ರೇಣಿಗೆ

ಬಿ ಮತ್ತು ಸಿ ಶ್ರೇಣಿಯ ಗುತ್ತಿಗೆ ಹೊಂದಿರುವ ಆಟಗಾರರಿಗೆ ಬಿಸಿಸಿಐ ಒಂದು ವರ್ಷದಲ್ಲಿ ಕ್ರಮವಾಗಿ 3 ಮತ್ತು 1 ಕೋಟಿ ರೂ ಸಂಭಾವನೆ ನೀಡುತ್ತದೆ.

Pic Credit: BCCI

ಪಂದ್ಯಗಳಿಗೆ ಪ್ರತ್ಯೇಕ

ಆಟಗಾರ ಯಾವುದೇ ಶ್ರೇಣಿಯಲ್ಲಿರಲಿ ಟೆಸ್ಟ್ ಪಂದ್ಯ, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಆಡಿದರೆ ಆತನಿಗೆ ಪ್ರತ್ಯೇಕ ಮ್ಯಾಚ್ ಫೀ ನೀಡಾಗುತ್ತದೆ.

Pic Credit: BCCI

ಎಷ್ಟು ಮ್ಯಾಚ್ ಫೀ?

ಟೆಸ್ಟ್ ಪಂದ್ಯಕ್ಕೆ 15 ಲಕ್ಷ; ಓಡಿಐಗೆ 6 ಲಕ್ಷ ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂನಷ್ಟು ಮ್ಯಾಚ್ ಫೀ ಅನ್ನು ಪ್ರತೀ ಆಟಗಾರ ಪಡೆಯಬಹುದು.

Pic Credit: BCCI

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ ತಂಡ ಯಾವಾಗ ಪ್ರಕಟ?