ಮಂಗೋಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ನೇಪಾಳ ತಂಡ ಬರೋಬ್ಬರಿ ಐದು ವಿಶ್ವ ದಾಖಲೆ ನಿರ್ಮಿಸಿದೆ.
27 September 2023
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 3 ವಿಕೆಟ್ ನಷ್ಟಕ್ಕೆ 314 ರನ್ ಕಲೆಹಾಕಿದೆ. ಇದು ಟಿ20 ಮಾದರಿಯಲ್ಲಿ ದಾಖಲಾದ ಅತ್ಯಧಿಕ ಸ್ಕೋರ್ ಎಂಬ ವಿಶ್ವದಾಖಲೆ ನಿರ್ಮಿಸಿದೆ.
ಕೇವಲ 34 ಎಸೆತಗಳಲ್ಲಿ ಶತಕ ಪೂರೈಸಿದ ಕುಶಾಲ್ ಮಲ್ಲ ಟಿ20 ಕ್ರಿಕೆಟ್ನಲ್ಲಿ ವೇಗದ ಶತಕ ಸಿಡಿಸಿದ ಬ್ಯಾಟ್ ಎಂಬ ದಾಖಲೆ ಕೂಡ ಬರೆದಿದ್ದಾರೆ.
ಈ ಹಿಂದೆ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿ ಈ ದಾಖಲೆ ಇತ್ತು.
ತಂಡದ ಮತ್ತೊಬ್ಬ ಆಟಗಾರ ದೀಪೇಂದ್ರ ಸಿಂಗ್ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಅತಿ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದರು.
ಈ ಹಿಂದೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ಭಾರತ ಮಾಜಿ ಆಟಗಾರ ಯುವರಾಜ್ ಸಿಂಗ್ ಹೆಸರಲ್ಲಿ ಈ ದಾಖಲೆ ಇತ್ತು.
ಇನ್ನು 314 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಮಂಗೋಲಿಯಾ ತಂಡ ಕೇವಲ 41 ರನ್ಗಳಿಗೆ ಆಲೌಟ್ ಆಯಿತು.
ಈ ಮೂಲಕ 273 ರನ್ಗಳ ಗೆಲುವು ಸಾಧಿಸಿದ ನೇಪಾಳ, ಟಿ20 ಯಲ್ಲಿ ಬೃಹತ್ ಅಂತರದ ಗೆಲುವು ದಾಖಲಿಸಿದ ತಂಡವೆಂಬ ದಾಖಲೆಯನ್ನೂ ಬರೆಯಿತು.
ಈ ಪಂದ್ಯದಲ್ಲಿ ಬರೋಬ್ಬರಿ 26 ಸಿಕ್ಸರ್ ಸಿಡಿಸಿದ ನೇಪಾಳ ತಂಡ, ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡವೆಂಬ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿತು.
ಇದನ್ನೂ ಓದಿ