ಮಲಗಿದ ತಕ್ಷಣ ನಿದ್ರೆ ಬಾರದಿರಲು ಕಾರಣ ಇಲ್ಲಿದೆ

12  September  2023

Pic credit - Hindustan Times

ಮಲಗುವ ಮುನ್ನ ಚಾಕೊಲೇಟ್ ತಿಂದರೇ ಬೇಗನೆ ನಿದ್ದೆ ಬರುವುದಿಲ್ಲ. ಇದರಲ್ಲಿನ ಸಣ್ಣ ಪ್ರಮಾಣದ ಕೆಫೇನ್ ಅಂಶಗಳು ನಿಮ್ಮ ಸುಖಕರ ನಿದ್ದಗೆ ಅಡ್ಡಿ ಉಂಟುಮಾಡುತ್ತವೆ.

ಚಾಕಲೇಟ್ ತಿನ್ನುವುದು

Pic credit - Hindustan Times

ಮೊಟ್ಟೆ, ಪನ್ನೀರ್​ನಂಥ ಹೆಚ್ಚು ಪ್ರೋಟಿನ್​ಯುಕ್ತ ಆಹಾರಗಳು ಜೀರ್ಣಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತವೆ. ಮಲಗುವ ಮುನ್ನ ಈ ಪದಾರ್ಥಗಳ ಸೇವನೆ ನಿಯಂತ್ರಿಸಿ

ಮೊಟ್ಟೆ, ಪನ್ನೀರ್ ತಿನ್ನದಿರಿ 

Pic credit - Hindustan Times

ಮಲಗುವುದಕ್ಕಿಂತ ಎರಡರಿಂದ ಮೂರು ಗಂಟೆ ಮುನ್ನ ಹೆಚ್ಚು ಊಟ ಮಾಡುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಇದರಿಂದ ಬೇಗನೆ ನಿದ್ರೆ ಬರುವುದಿಲ್ಲ. ರಾತ್ರಿ ಮಲಗುವ ಮುನ್ನ ಜೀರ್ಣಕ್ರಿಯೆಗೆ ಸುಲುಭವಾಗವ ಆಹಾರ ತಿನ್ನಿ

ಹೆಚ್ಚು ಊಟ ಸೇವಿಸುವುದು

Pic credit - Hindustan Times

ಮದ್ಯಪಾನ ಸೇವನೆಯಿಂದ ಬೇಗನೆ ನಿದ್ದೆ ಬರಬಹುದು. ಆದರೆ, ಒಟ್ಟಾರೆ ನಿದ್ದೆಯ ಗುಣಮಟ್ಟಕ್ಕೆ ಇದು ಅಡ್ಡಿಯಾಗುತ್ತದೆ. 

ಮದ್ಯಪಾನ

Pic credit - Hindustan Times

ಅತಿಯಾಗಿ ಕರಿದ ಆಹಾರ ಸೇವಿಸುವುದರಿಂದ ನಿದ್ದೆ ಬೇಗನೆ ಬರುವುದಿಲ್ಲ. ಈ ಆಹಾರಗಳು ಆಸಿಡ್​ ರಿಫ್ಲಕ್ಸ್​​ಗೆ ಕಾರಣವಾಗಿ, ನಿದ್ರೆಗೆ ಅಡ್ಡಿಯಾಗಬಹುದು. 

ಕರಿದ ಆಹಾರ ಸೇವನೆ

Pic credit - Hindustan Times

ರಾತ್ರಿ ಮಲಗುವ ಮೊದಲು ಕಿತ್ತಳೆ, ದ್ರಾಕ್ಷಿ ಅಥವಾ ಇತರ ಸಿಟ್ರಸ್ ಹಣ್ಣುಗಳನ್ನು ತಿನ್ನುವುದು ಆಮ್ಲೀಯತೆ ಸೇರಿದಂತೆ ಅಜೀರ್ಣದ ಅನೇಕ ಸಮಸ್ಯೆ ಉಂಟು ಮಾಡುತ್ತದೆ. ನಿದ್ರೆಗೆ ಅಡ್ಡಿ ಉಂಟು ಮಾಡುತ್ತದೆ.

ಸಿಟ್ರಸ್ ಹಣ್ಣು

Pic credit - Hindustan Times

ಹೆಚ್ಚು ಮಸಾಲೆಯುಕ್ತ ಆಹಾರವು ಅಜೀರ್ಣ ಮತ್ತು ಎದೆಯುರಿಗೆ ಕಾರಣವಾಗುತ್ತದೆ. ಹೀಗಾಗಿ ಖಾರವಾದ ಆಹಾರ ಜೀರ್ಣವಾಗಲು ಮಲಗುವ ಎರಡು ಗಂಟೆ ಮುನ್ನ ಸೇವಿಸಿ

ಹೆಚ್ಚು ಮಸಾಲೆಯುಕ್ತ ಆಹಾರ ಸೇವನೆ

Pic credit - Hindustan Times

ರಾತ್ರಿ ಮಲಗುವ ಮುನ್ನ ಕಾಫಿ ಕುಡಿದರೇ ನಿದ್ದೆ ಬೇಗನೆ ಬರುವುದಿಲ್ಲ. ಇದರಲ್ಲಿನ ಕೆಫೀನ್ ಅನ್ನು ಹೊರಹಾಕಲು ದೇಹಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಮಲಗುವುದಕ್ಕಿಂತ 6 ಗಂಟೆಗಳ ಒಳಗೆ ಕಾಫಿ ಕುಡಿಯಿರಿ.

ಕಾಫಿ ಕುಡಿಯುವುದು

Pic credit - Hindustan Times

ಮಲಗುವ ವೇಳೆ ಮೊಬೈಲ್‌, ಲ್ಯಾಪ್​ಟಾಪ್​, ಟ್ಯಾಬ್‌ನಂತಹ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ರಾತ್ರಿ ವೇಳೆ ಹೆಚ್ಚು ಬಳಸುವುದರಿಂದ ಕಣ್ಣಿಗೆ ತೊಂದರೆಯಾಗಿ ನಿದ್ದೆ ಬೇಗನೆ ಬರುವುದಿಲ್ಲ.  

ಎಲೆಕ್ಟ್ರಾನಿಕ್‌ ಉಪಕರಣ ಬಳಕೆ   

Pic credit - Hindustan Times