ಭಾರತದಿಂದ ಹೆಚ್ಚು ಉತ್ಪಾದನೆಯಾಗುವ ಆಹಾರ ಮತ್ತು ರಪ್ತು ಕುರಿತು ಮಹಿತಿ ಇಲ್ಲಿದೆ

ಆಜಾದಿಕಾ ಅಮೃತ್ ಮಹೋತ್ಸವ ಅಂಗವಾಗಿ PIB ಬಿಡುಗಡೆ ಮಾಡಿದ ವರದಿ ಪ್ರಕಾರ ಭಾರತದಲ್ಲಿ ಆಹಾರ ಉತ್ಪಾದನೆಯಲ್ಲಿ ಏರಿಕೆ ಕಂಡಿದೆ ಮತ್ತು ರಪ್ತಿನ ಪ್ರಮಾಣ ಕೂಡ ಏರಿಕೆಯಾಗಿದೆ

ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲಿ ನಂ 1 ದೇಶ ಭಾರತ 

ವಿಶ್ವದ ಒಟ್ಟಾರೆ ಹಾಲಿನ ಉತ್ಪಾದನೆಯಲ್ಲಿ, ಭಾರತ ಒಂದೇ 23% ರಷ್ಟು ಹಾಲು ಉತ್ಪಾದನೆ ಮಾಡುತ್ತದೆ. 1950-51 ರಲ್ಲಿ 17 ಮಿಲಿಯನ್​ ಹಾಲು ಉತ್ಪಾದಿಸುತ್ತಿತ್ತು ಪ್ರಸ್ತುತ 2020-21ರಲ್ಲಿ 209.96 ಮಿಲಿಯನ್​ನಷ್ಟು ಹಾಲು ಉತ್ಪಾದಿಸುತ್ತದೆ. 

ಮೀನು ಉತ್ಪಾದನೆಯಲ್ಲಿ  ಭಾರತ ಜಗತ್ತಿನ 2ನೇ ಅತಿ ದೊಡ್ಡ ರಾಷ್ಟ್ರವಾಗಿದೆ

2020-21 ರ ಆರ್ಥಿಕ ವರ್ಷದಲ್ಲಿ ಭಾರತ 145 ಲಕ್ಷ ಟನ್ ಮೀನು ಉತ್ಪಾದಿಸಿತ್ತು. ಈ ವಲಯವು ಭಾರತದಲ್ಲಿ ಸುಮಾರು 28 ಮಿಲಿಯನ್ ಜನರಿಗೆ ಜೀವನೋಪಾಯವನ್ನು ಒದಗಿಸುತ್ತದೆ

ಭಾರತದಲ್ಲಿ ಆಹಾರ ಧಾನ್ಯ ಉತ್ಪಾದನೆ

1950: 5.82 ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ 2014-15: 252.02 ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ 2021-22: 314.51 ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ

ಭಾರತದಲ್ಲಿ ಸಾಂಬಾರ ಪದಾರ್ಥಗಳ ಉತ್ಪಾದನೆ

ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ ಸಾಂಬಾರ ಪದಾರ್ಥಗಳ ಉತ್ಪಾದನೆ 15 ಪಟ್ಟು ಏರಿಕೆಯಾಗಿದೆ ಸಾಂಬಾರ ಪದಾರ್ಥಗಳ ಕಳೆದ 30 ವರ್ಷಗಳಲ್ಲಿ 120 ಪಟ್ಟು ಹೆಚ್ಚಾಗಿದೆ

ಭಾರತದಲ್ಲಿ ಕಾಫಿ ಉತ್ಪಾದನೆ

1960-61 ರಿಂದ 2020-21 ರ ವರೆಗೆ ಕಾಫಿ ರಪ್ತಿನ ಪ್ರಮಾಣವು 12 ಪಟ್ಟು ಹೆಚ್ಚಾಗಿದೆ. 2020ರಲ್ಲಿ ಭಾರತವು ಕಾಫಿ ರಪ್ತಿನಲ್ಲಿ ಜಗತ್ತಿನಲ್ಲಿ 7ನೇ ಅತಿ ದೊಡ್ಡ ದೇಶವಾಗಿ ಹೊರಹೊಮ್ಮಿದೆ