ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ಈ ಉದ್ಯಾನವನ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲೂ ಪೇಟೆ ತಾಲೂಕಿನಿಂದ ಮೈಸೂರಿನ ನಂಜನಗೂಡು ತಾಲೂಕಿನ ವರೆಗೂ ವಿಸ್ತರಿಸಿದೆ.

ನೀಲಗಿರಿಯಲ್ಲಿ ವನ್ಯ ಜೀವಿಗಳ ಆಶ್ರಯ ತಾಣವಾಗಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ತಾಣವೂ ಹೌದು.

ಇದು ಹುಲಿ, ಆನೆ, ಚಿರತೆ , ಅನೇಕ ಜಾತಿ ಜಿಂಕೆಗಳು ಮತ್ತು ವೈವಿಧ್ಯಮಯ ವನ್ಯಜೀವಿಗಳ ಆಶ್ರಯ ತಾಣವಾಗಿದೆ.

ಇಲ್ಲಿ ನೀವು 200 ರಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಕಾಣಬಹುದು.

ಬಂಡೀಪುರ ಸಸ್ಯ ಸಂಕುಲಕ್ಕೆ ಸಂಬಂಧಿಸಿದಂತೆ ಶ್ರೀಗಂಧದ ಮರ ಸೇರಿದಂತೆ 800ರಕ್ಕೂ ಹೆಚ್ಚು ಜಾತಿಯ ಸಸ್ಯಗಳನ್ನು ಕಾಣಬಹುದು.

ಈ ಉದ್ಯಾನವನ ಒಂದು ಕಾಲದಲ್ಲಿ ಮೈಸೂರು ಮಹಾರಾಜರ ಭೇಟೆಯ ತಾಣವಾಗಿತ್ತು. ಆದರೆ 1974ರಲ್ಲಿ ವನ್ಯ ಜೀವಿ ಅಭಯಾರಣ್ಯವಾಗಿ ಮಾರ್ಪಟ್ಟಿತು.

ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ  ಅಕ್ಟೋಬರ್ ನಿಂದ ಮೇ ನಡುವೆ. ವಾತಾವಾರಣವೂ ಕೂಡ ಆಹ್ಲಾದಕರವಾಗಿರುತ್ತದೆ.

ಜಂಗಲ್ ಸಫಾರಿಯ ಮೂಲಕ ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಸಿಕೊಳ್ಳಬಹುದು. ಟ್ರೆಕ್ಕಿಂಗ್ , ಕ್ಯಾಪಿಂಗ್ಗೆ ಪಾರ್ಕ್ ಒಳಗೆ ಅನುಮತಿ ಇಲ್ಲ.