ತ್ವಚೆಯ ರಕ್ಷಣೆ ಅಂದರೆ ನಿಮ್ಮ ತ್ವಚೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ. ಯಾಕೆಂದರೆ  ಧೂಳು ಮಾಲಿನ್ಯಗಳಿಂದ ತ್ವಚೆಗೆ ರಕ್ಷಣೆ ಅಗತ್ಯ.

ಚಳಿಗಾಲದಲ್ಲಿ ತೇವಾಂಶವನ್ನು ಕಳೆದುಕೊಳ್ಳುವುದರಿಂದ, ಮಾಯಿಶ್ಚರೈಸರ್ ರನ್ನು ಪ್ರತಿ ಬಾರಿ ಮೇಕಪ್ ಗಿಂತ ಮೊದಲು ಮುಖಕ್ಕೆ ಹಚ್ಚಿ. 

ಬಿಸಿಲು ಇಲ್ಲದಿದ್ದರೂ ಕೂಡ ಸನ್ ಸ್ಕ್ರೀನ್ ಹಚ್ಚುವುದನ್ನು  ಮರೆಯದಿರಿ. ಇದು ನಿಮ್ಮ ತ್ವಚೆಯ ಮೇಲ್ಮೈ ಪದರಕ್ಕೆ ರಕ್ಷಣೆ ನೀಡುತ್ತದೆ.

ನಿಮ್ಮ ತ್ವಚೆಯ ಬಣ್ಣಕ್ಕೆ ಹೋಲುವ ಫೌಂಡೇಶನ್ ಕ್ರಿಮ್ ಹಚ್ಚಿ. ಇದು ನಿಮ್ಮ ಮೇಕ್ ಅಪ್ ದೀರ್ಘಕಾಲದ ವರೆಗೆ ಉಳಿದುಕೊಳ್ಳಲು ಸಹಾಯಕವಾಗಿದೆ.

ಕನ್ಸೀಲರ್ ಸ್ಕಿಪ್ ಮಾಡದಿರಿ. ಇದು ನಿಮ್ಮ ಕಣ್ಣಿನ, ತುಟಿಗಳ ಸುತ್ತಲಿನ ಕಪ್ಪು ಕಲೆಯನ್ನು ಮರೆಮಾಚಲು ಸಹಾಯಕವಾಗಿದೆ. 

ಐಲೈನರ್ ಹಚ್ಚುವುದರಿಂದ ನಿಮ್ಮ ಕಣ್ಣುಗಳು ಅತ್ಯಂತ ಆಕರ್ಷಕವಾಗಿ ಹಾಗೂ ನೀಳವಾಗಿ ಕಾಣುತ್ತದೆ. ಸಿಂಪಲ್ ಮೇಕ್ ಅಪ್ ಇದ್ದರೂ ಕೂಡ ಐಲೈನರ್ ಸ್ಕಿಪ್ ಮಾಡಿದಿರಿ.

ಲಿಪ್ ಸ್ಟಿಕ್ ನಿಮ್ಮ ಮೇಕ್ ಅಪ್ ಗೆ ಪರಿಪೂರ್ಣ ಲುಕ್ ನೀಡುವಲ್ಲಿ ಸಹಾಯಕವಾಗಿದೆ. ಸೌಂದರ್ಯವನ್ನು ಹೆಚ್ಚಿಸುತ್ತದೆ.