ಕೇವಲ 5 ನಿಮಿಷಗಳಲ್ಲಿ ಮನೆಯಲ್ಲಿಯೇ ಲಿಪ್ ಆಯಿಲ್ ತಯಾರಿಸಿ

ತುಟಿಗಳು ತುಂಬಾ ಸೂಕ್ಷ್ಮವಾಗಿರುವುದರಿಂದ ತುಟಿಗಳ ಕಾಳಜಿ ವಹಿಸುವುದು ತುಂಬಾ ಅಗತ್ಯವಾಗಿರುತ್ತದೆ.

ಆದ್ದರಿಂದ ನೀವು ಯಾವುದೇ ದುಬಾರಿ ಲಿಪ್ ಆಯಿಲ್ ಗಳನು ಖರೀದಿಸುವ ಬದಲಾಗಿ ಮನೆಯಲ್ಲಿಯೇ ನೈಸರ್ಗಿಕ ಪದಾರ್ಥ ಬಳಸಿ ಲಿಪ್ ಆಯಿಲ್ ತಯಾರಿಸಿ.

ಪುದೀನಾ ಎಣ್ಣೆ, ಲ್ಯಾವೆಂಡರ್ ಅಥವಾ ದ್ರಾಕ್ಷಿಹಣ್ಣಿನ ಎಣ್ಣೆಯಂತಹ ತುಟಿ-ಸುರಕ್ಷಿತ ಸಾರಯುಕ್ತ ತೈಲವನ್ನು ಬಳಸಬಹುದು.

ಲಿಪ್ ಆಯಿಲ್ ಮಾಡಲು ಬೇಕಾಗಿರುವ ಸಾಮಾಗ್ರಿಗಳು 2 ಚಮಚ ಬಾದಾಮಿ ಅಥವಾ ತೆಂಗಿನ ಎಣ್ಣೆ. ಜೊತೆಗೆ ನಿಮ್ಮ ಆಯ್ಕೆಯ ಸಾರಯುಕ್ತ ತೈಲ 10 ಹನಿಗಳು.

ಈ ಎರಡು ಪದಾರ್ಥಗಳನ್ನು ಸರಿಯಾಗಿ ಮಿಶ್ರಣ ಮಾಡಿ ಹಾಗೂ ಇದಾದ ಬಳಿಕ ಸಣ್ಣ ಮುಚ್ಚಳ ಇರುವ ಕಂಟೇನರ್‌ಗೆ ಹಾಕಿ. ತಂಪಾದ ಸ್ಥಳದಲ್ಲಿ ಸಂಗ್ರಹಿಸಿಡಿ.

ಈ ಲಿಪ್ ಆಯಿಲ್ ಪ್ರತೀ ಸಲ ಬಳಸುವಾಗ ಕೇವಲ ಎರಡು ಹನಿಗಳಷ್ಟು ಮಾತ್ರ ಬಳಸಿ. ಇದು ನಿಮ್ಮ ತುಟಿಗಳಿಗೆ ತೇವಾಂಶವನ್ನು ನೀಡಿ, ಬಿರುಕು ಬಿಡದಂತೆ ಸಹಕರಿಸುತ್ತದೆ.