ಸಕ್ಕರೆಯಿಂದ ಸುಲಭವಾಗಿ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿ
ಸಕ್ಕರೆಯು ಗ್ಲೈಕೋಲಿಕ್ ಆಮ್ಲದ ಉತ್ತಮ ಮೂಲವಾಗಿದ್ದು, ಇದು ನಿಮ್ಮ ತ್ವಚೆಯನ್ನು ನೈಸರ್ಗಿಕವಾಗಿ ಹೊಳೆಯುವಂತೆ ಮಾಡುತ್ತದೆ.
ಆದ್ದರಿಂದ ನಿಮ್ಮ ಮನೆಯಲ್ಲಿ ಲಭ್ಯವಿರುವ ಕೆಲವೊಂದಿಷ್ಟು ಪದಾರ್ಥಗಳನ್ನು ಸೇರಿಸಿ ಶುಗರ್ ಸ್ಕ್ರಬ್ ತಯಾರಿಸಿ.
1 ಚಮಚ ಸಕ್ಕರೆ ಮತ್ತು ಒಂದು ನಿಂಬೆಹಣ್ಣಿನ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಮುಖದ ಮೇಲೆ ಮಸಾಜ್ ಮಾಡಿ.
ಒಂದು ಚಮಚ ಗ್ರೀನ್ ಟೀ, ಸಕ್ಕರೆ ಹಾಗೂ 4 ಹನಿ ಆಲಿವ್ ಎಣ್ಣೆಯನ್ನು ಸೇರಿಸಿ,ಇದನ್ನು ಮುಖಕ್ಕೆ ಹಚ್ಚಿ.
ಒಂದು ಚಮಚ ಓಟ್ಸ್, ಸಕ್ಕರೆ ಹಾಗೂ 4 ಹನಿ ಆಲಿವ್ ಎಣ್ಣೆಯನ್ನು 10 ನಿಮಿಷಗಳ ಕಾಲ ಮುಖಕ್ಕೆ ಮಸಾಜ್ ಮಾಡಿ.
ಒಂದು ಚಮಚ ಆಲಿವ್ ಎಣ್ಣೆಯನ್ನು ಸಕ್ಕರೆಯೊಂದಿಗೆ ಸೇರಿಸಿ, ಈ ಮಿಶ್ರಣವನ್ನು 10 ನಿಮಿಷಗಳ ಕಾಲ ಮುಖಕ್ಕೆ ಮಸಾಜ್ ಮಾಡಿ.